ಮನೆ ಬಿಟ್ಟು ಹೋದ 9ನೇ ತರಗತಿ ಬಾಲಕ: ಮಲ್ಪೆಗೆ ಬಂದು ಹುಡುಕಿದ ಹೆತ್ತವರು

ಸ್ಮಾರ್ಟ್ ಪೋನ್ ನಲ್ಲಿ ಊರುಗಳನ್ನು ಹುಡುಕಿ ಮನೆ ಬಿಟ್ಟ ಬಾಲಕ

9ನೇ ತರಗತಿ ಬಾಲಕನೊಬ್ಬ ಅಮ್ಮನ ಮೊಬೈಲ್ ನಲ್ಲಿ ಪ್ರವಾಸಿ ತಾಣಗಳನ್ನು ಹುಡುಕಿ ಮನೆಯಿಂದ ನಾಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಪೋಷಕರು ಬಾಲಕನನ್ನು ಹುಡುಕುತ್ತಾ ಮಲ್ಪೆಗೆ ಆಗಮಿಸಿದ್ದಾರೆ.

ಆದಿತ್ಯಾ ಮನೆ ಬಿಟ್ಟ ಬಾಲಕನಾಗಿದ್ದು, 9 ನೇ ತರಗತಿ ಓದುತ್ತಿದ್ದಾನೆ. ಈತ ಮೇ 29 ರಂದು ಕಟ್ಟಿಂಗ್ ಶಾಪ್‍ಗೆಂದು ಮನೆಯಿಂದ ಹೋಗಿದ್ದ. ಮನೆಯಿಂದ ಹೊರಡೋ ಮುನ್ನ ತಾಯಿ ಫೋನ್ ನಲ್ಲಿ ಮಲ್ಪೆ , ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಬಟ್ಟೆಗಳನ್ನ ತೆಗೆದುಕೊಂಡು ಹೋಗಿದ್ದಾನೆ.

ಆದಿತ್ಯಾ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಮಗ ಮಿಸ್ಸಿಂಗ್ ಆದ ಬೆನ್ನಲ್ಲೆ ಪೋಷಕರು ಜ್ಯೋತಿಷ್ಯದ ಮೊರೆ ಹೋಗಿದ್ದಾರೆ. ಈ ವೇಳೆ ಜ್ಯೋತೀಷಿ ದಕ್ಷಿಣ ಕನ್ನಡ ಭಾಗದಲ್ಲಿದ್ದಾನೆಂದು ಹೇಳಿದ್ದಾರೆ. ಅಂತೆಯೇ ಜ್ಯೋತೀಷಿ ಮಾತು ಕೇಳಿ ಪೋಷಕರು ಕರಾವಳಿ ಭಾಗಕ್ಕೆ ಮಗನನ್ನ ಹುಡುಕಲು ಹೊರಟಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಪೋಷಕರು ಆದಿತ್ಯನಿಗಾಗಿ ಹುಡುಕಾಟ ನಡೆಸಿದ್ದಾರೆ.

ಆರ್‍ಟಿ ನಗರ ಸೇರಿದಂತೆ ಮಲ್ಪೆ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕ ಮೈಸೂರು ಭಾಗದಲ್ಲಿ ಇದ್ದಾನೆಂದು ಮಾಹಿತಿ ಸಿಕ್ಕದೆ. ಆದರೆ ಇನ್ನೂ ಕೂಡ ನಿಖರತೆ ಇಲ್ಲ. ಹಗಲು-ರಾತ್ರಿ ಮೈಸೂರು , ಕರಾವಳಿ ಭಾಗದಲ್ಲಿ ಪೊಲೀಸರ ಜೊತೆ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.