ಕಿನ್ನಿಗೋಳಿ ಪಂಚಾಯತ್'ನಲ್ಲಿ ವರಿ ವಸೂಲಿಯಲ್ಲಿ ಮೋಸ : ಸರಕಾರಕ್ಕೆ ವಂಚನೆ

ಅಧಿಕಾರಿಗಳ ನಿರ್ಲಕ್ಷ್ಯ : ಎಲ್ಲಿ ಹೋಯ್ತು 8ಲಕ್ಷಕ್ಕೂ ಅಧಿಕ ಹಣ

ಮಂಗಳೂರು: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾರುಕಟ್ಟೆ, ಬಸ್ ನಿಲ್ದಾಣದ ಫೀಸ್ ವಸೂಲಿಯಲ್ಲಿ ದೊಡ್ಡ ಮಟ್ಟದ ಮೋಸ ನಡೆದಿದೆ, ಸರಕಾರಕ್ಕೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಒಟ್ಟು 8ಲಕ್ಷಕ್ಕೂ ಅಧಿಕ ಹಣ ಪಂಚಾಯತ್ ಗೆ ಕಟ್ಟದೆ ಬಾಕಿಯಿದೆ ಎಂದು ತಿಳಿದುಬಂದಿದೆ. ಈ ರೀತಿ ಸರಕಾರಕ್ಕೆ ವಂಚನೆ ನಡೆದ ಬಗ್ಗೆ ಅಧಿಕಾರಿಗಳು ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2021ರಲ್ಲಿ ಮೂರು ವರ್ಷದ ಅವಧಿಗೆ ಏಲಂ ಪ್ರಕ್ರಿಯೆ ನಡೆದಿದೆ. ಅತೀ ಹೆಚ್ಚು ಬಿಡ್ಡು ಮಾಡುವ ಮೂಲಕ ವಸೂಲಿ ಹಕ್ಕನ್ನು ಹೊಸಕಟ್ಟ ಮನೆ ನಡುಗೋಡು ನಿವಾಸಿ ಕಲ್ಪೇಶ್ ಶೆಟ್ಟಿ ಪಡೆದಿದ್ದು. ಸದ್ಯ ಈ ರೀತಿಯ ವಂಚನೆ ಆರೋಪ ಕೇಳಿಬಂದಿದೆ.

ಹಿಂದೆ ಗ್ರಾಮ ಪಂಚಾಯತ್ ಆಗಿದ್ದ ಕಿನ್ನಿಗೋಳಿ ಪ್ರಸ್ತುತ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತ್ ಆಗಿದ್ದು, ಇಂತಹ ವಸೂಲಿ ಹಣದಿಂದಲೇ ಪಂಚಾಯತ್ ಅಭಿವೃದ್ಧಿ ಕಾಣಲು ಸಾಧ್ಯ. ಸದ್ಯ ಇಂತಹ ದೊಡ್ಡ ಮಟ್ಟದ ಆರೋಪ ಕೇಳಿ ಬಂದಿದ್ದು, ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದ್ದು, ಸರಕಾರಕ್ಕೆ ಸೇರಬೇಕಾದ ಹಣವನ್ನು ಎಲ್ಲರೂ ಸೇರಿ ವಂಚಿಸಿದ್ದಾರೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಇಂತಹ ವಂಚನೆ ಮಾಡುತ್ತಿದ್ದರು , ಟೆಂಡರ್ ಇನ್ನೂ ಕಲ್ಪೇಶ್ ಶೆಟ್ಟಿ ಅವರ ಕೈಯಲ್ಲೇ ನೀಡಿರುವುದು ಎಷ್ಟು ಸರಿ.!?

ಅಧಿಕಾರಿಗಳಿಗೆ ತಿಳಿಯದೆ ಇಂತಹ ಮೋಸ ನಡೆಯಲು ಸಾಧ್ಯವೇ.! ಜನರ ಹಣವನ್ನು ಈ ರೀತಿ ತಿಂದು ತೆಗುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಇರುವವರೆಗೂ ಊರು ಅಭಿವೃದ್ಧಿಯಾಗಲು ಸಾಧ್ಯವೇ.!? ಇದರ ಬಗ್ಗೆ ತಕ್ಷಣ ತನಿಖೆ ನಡೆದು ಆರೋಪಿಗಳಿಗೆ ಶಿಕ್ಷೆಯಾಗ ಬೇಕು ಎನ್ನುವುದು ಜನರ ಅಭಿಪ್ರಾಯ.