ಲುಡೋ ಚಟ.. ತನ್ನನು ತಾನೇ ಪಣಕ್ಕಿಟ್ಟು ಸೋತ ಮಹಿಳೆ.!

ತನ್ನನು ತಾನೇ ಪಣಕ್ಕಿಟ್ಟು ಸೋತ ಮಹಿಳೆ.!

ಬೇರೆ ಬೇರೆ ರೀತಿಯ ಚಟಕ್ಕೆ ಬಿದ್ದು ಜೀವನವನ್ನೇ ನಾಶ ಮಾಡಿಕೊಂಡ ಹಲವು ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಇದು ಸ್ವಲ್ಪ ವಿಚಿತ್ರ ಸ್ಟೋರಿ. ಯಾವುದು ಕೂಡ ಚಟವಾಗಬಾರದು ಎನ್ನುವುದಕ್ಕೆ ಇನ್ನೋಂದು ಉದಾಹರಣೆ. ಇಲ್ಲೊಬ್ಬಳಿಗೆ ಲುಡೋ ಆಟ ಚಟವಾಗಿ ತನ್ನ ಗಂಡನನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಕೊತ್ವಾಲಿ ಗ್ರಾಮದ ದೇವಕಲಿ ಪ್ರದೇಶದಲ್ಲಿ ರೇಣು ಎಂಬ ಮಹಿಳೆ ತನ್ನ ಗಂಡನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಗಂಡ ಜೈಪುರಕ್ಕೆ ಕೆಲಸಕ್ಕೆ ಹೋಗುವುದರಿಂದ ಆಕೆಗೆ ತಿಂಗಳಿಗಿಷ್ಟು ಎಂದು ಗಂಡ ಹಣ ಕಳುಹಿಸುತ್ತಿದ್ದ. ಆದರೆ ಆಕೆ ಆ ಹಣದಿಂದ ಲುಡೋ ಆಟದ ಚಟಕ್ಕೆ ಬಿದ್ದು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾಳೆ. ದಿನ ನಿತ್ಯ ಮನೆ ಮಾಲೀಕರೊಂದಿಗೆ ಲುಡೋ ಆಟವಾಡುವ ರೇಣು, ಸ್ವಲ್ಪ ಸ್ವಲ್ಪ ಹಣವನ್ನು ಬೆಟ್ಟಿಂಗ್‌ ಗಾಗಿ ಹಾಕುತ್ತಿದ್ದಳು. ಈ ಹಣ ಖಾಲಿಯಾಗಿ ಮುಂದೆ ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದ ರೇಣು ಒಂದು ದಿನ ಲುಡೋವನ್ನು ತನ್ನನು ತಾನೇ ಪಣಕ್ಕಿಟ್ಟು ಆಡುತ್ತಾರೆ. 

ಈ ಆಟದಲ್ಲಿ ರೇಣು ಸೋಲುತ್ತಾರೆ. ಇನ್ನು ಸೋತ ಬಳಿಕ ಏನು ಮಾಡುವುದೆಂದು ಈ ವಿಚಾರವನ್ನು ಗಂಡನಿಗೆ ಹೇಳುತ್ತಾರೆ. ಪತಿ ಈ ಬಗ್ಗೆ ಪ್ರತಾಪಗಢ ಠಾಣೆಯಲ್ಲಿ ದೂರು ನೀಡುತ್ತಾರೆ. ಇದರ ಕುರಿತು ರೇಣು ಪತಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್‌ ವೈರಲ್‌ ಆಗಿದೆ. ಲುಡೋದಲ್ಲಿ ಸೋತಿದ್ದರಿಂದ ರೇಣು ಮನೆ ಮಾಲೀಕನೊಂದಿಗೆ ವಾಸಿಸಲು ಶುರು ಮಾಡಿದ್ದಾಳೆ. ಅವಳನ್ನು ಅಲ್ಲಿಂದ ವಾಪಾಸ್‌ ಕರೆ ತರಲು ಪ್ರಯತ್ನಿಸಿದೆ ಆದರೆ ಅವಳು ಬರಲು ಒಪ್ಪಲಿಲ್ಲ ಎಂದು ರೇಣು ಪತಿ ಹೇಳುತ್ತಾರೆ.