ಡ್ರಗ್ ಪೆಡ್ಲರ್‌ಗಳ ಹೆಡೆಮುರಿಕಟ್ಟಿದ "ತುಳುನಾಡಿನ ಮಿಶಾಲ್ ಕ್ಟೀನಿ ಡಿ'ಕೋಸ್ಟಾಗೆ ಶೌರ್ಯ ಪ್ರಶಸ್ತಿ"

ಮಿಶಾಲ್ ಕ್ಟೀನಿ ಡಿ'ಕೋಸ್ಟಾಗೆ ಶೌರ್ಯ ಪ್ರಶಸ್ತಿ

ಮುಂಬೈನಲ್ಲಿ ನೈಜೀರಿಯಾದ ಡ್ರಗ್ ದಂಧೆಕೋರರನ್ನು ಬೆನ್ನಟ್ಟಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಮುಂಬೈ ಕಸ್ಟಮ್ಸ್‌ನ ನೇರ ತೆರಿಗೆ ವಿಭಾಗದ ಉಪ ನಿರ್ದೇಶಕಿ ಡಿಆರ್‌ಐ ಮಿಶಾಲ್ ಕ್ಟೀನಿ ಡಿ'ಕೋಸ್ಟಾ ಅವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ನೈಜೀರಿಯಾದ ಡ್ರಗ್ ಪೆಡ್ಲರ್‌ಗಳು 1.9 ಕೆಜಿ ಡ್ರಗ್ ಮಾತ್ರೆಗಳೊಂದಿಗೆ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಈ ವೇಳೆ ಡ್ರಗ್ ಪೆಡ್ಲರ್‌ಗಳು ಕಟ್ಟಡದ ಮೇಲ್ಛಾವಣಿಯಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿಯ ಮೂಲದ ಮಿಶಾಲ್ ಅವರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದು, ಅವರ ಸಾಹಸಕ್ಕೆ ಡಿಆರ್‌ಐ ಸಂಸ್ಥಾಪನಾ ದಿನದಂದು ಶೌರ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2015ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ನಿಡ್ಡೋಡಿ ಗ್ರಾಮದ ನೀರುಡೆಯ ಮಿಶಾಲ್ ಕ್ವೀನಿ ಡಿ'ಕೋಸ್ಟ 387ನೇ ರ್‍ಯಾಂಕ ಪಡೆದಿದ್ದು, ಮಿಶಾಲ್ ಅವರು ಲಾಜರಸ್ ಡಿ’ಕೋಸ್ಟ -ನ್ಯಾನ್ಸಿ ಡಿ’ಕೋಸ್ಟ ಅವರ ದ್ವಿತೀಯ ಪುತ್ರಿಯಾಗಿದ್ದಾರೆ.