"ಮುಸ್ಲಿಂ ಯೂತ್​ ಲೀಗ್​ನಿಂದ ಹಿಂದೂ ವಿರೋಧಿ ಘೋಷಣೆ" ಭಾರಿ ಆಕ್ರೋಶ ವ್ಯಕ್ತ.!
'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' - ಮುಸ್ಲಿಂ ಲೀಗ್‌ ಜಾಥಾದಲ್ಲಿ ಘೋಷಣೆ

ಹಿಂದೂಗಳನ್ನು ದೇವಸ್ಥಾನದೊಳಗೆ ನೇಣಿಗೇರಿಸುತ್ತೇವೆ, ಜೀವಂತ ಸುಟ್ಟು ಹಾಕುತ್ತೇವೆ ಎಂಬುದಾಗಿ ಮುಸ್ಲಿಂ ಯೂತ್​ ಲೀಗ್ ಕೇರಳದ ಕಾಸರಗೋಡಿನಲ್ಲಿ​ ಘೋಷಣೆ ಮಾಡಿರುವುದು ವಿವಾದಕ್ಕೀಡಾಗಿದ್ದು, ಭಾರಿ ಆಕ್ರೋಶಕ್ಕೂ ಕಾರಣವಾಗಿದೆ.

ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಮುಸ್ಲಿಂ ಯೂತ್ ಲೀಗ್​ ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಗಾಡ್​ನಲ್ಲಿ ನಡೆಸಿದ್ದ ರಾಲಿ ಈ ಘೋಷಣೆಯನ್ನು ಕೂಗಲಾಗಿದೆ. ಈ ಆ ರಾಲಿಯಲ್ಲಿ ಕೆಲವರು ಹಿಂದೂಗಳನ್ನು ಉದ್ದೇಶಿಸಿ, ನಾವು ನಿಮ್ಮನ್ನು ದೇವಸ್ಥಾನದೊಳಗೇ ನೇಣಿಗೇರಿಸುತ್ತೇವೆ, ಜೀವಂತ ಸುಟ್ಟು ಹಾಕುತ್ತೇವೆ ಎಂದು ಘೋಷಣೆ ಕೂಗಿದ್ದಾರೆ.

ಈ ಹೇಳಿಕೆ ವಿರುದ್ಧ ಇದೀಗ ಬಿಜೆಪಿ ಮಾತ್ರವಲ್ಲದೆ ಹಿಂದೂಗಳಿಂದಲೂ ವಿರೋಧ ಕೇಳಿಬಂದಿದೆ. ಈ ಕುರಿತು ಬಿಜೆಪಿ ಐಟಿ ಸೆಲ್​ನ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಕೇರಳದಲ್ಲಿ ಹಿಂದೂಗಳು ಹಾಗೂ ಕ್ರೈಸ್ತರಿಗೆ ಸುರಕ್ಷೆ ಇದೆಯೇ? ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಬೆಂಬಲವಿಲ್ಲದೆ ಇಂಥ ಹೇಳಿಕೆಗಳು ಬರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕೇರಳ ಬಿಜೆಪಿ ಅಧಿಕೃತ ಟ್ವಿಟರ್​​​ ಹ್ಯಾಂಡಲ್​ನಿಂದ ಈ ಕುರಿತು ರಾಹುಲ್​ ಗಾಂಧಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಲಾಗಿದೆ.

ಘಟನೆಯನ್ನು ಖಂಡಿಸಿರುವ ಕೇರಳ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಜಾತ್ಯತೀತ' ಎಂದು ಕರೆಯುವ ಪಕ್ಷದ ಕ್ರಮಗಳಿಗೆ ಹೊಣೆಗಾರರಾಗಬೇಕು ಎಂದು ಹೇಳಿದೆ. ಮುಸ್ಲಿಂ ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಜ್ ಕೂಡ ಹೇಳಿಕೆ ನೀಡಿದ್ದಯ, ಸಂಘಟನೆಯ ಸಿದ್ಧಾಂತಕ್ಕೆ ವಿರುದ್ಧವಾದ ಮತ್ತು ಸಮಾಜದಲ್ಲಿ ಒಡಕು ಮೂಡಿಸುವಂತಹ ಘೋಷಣೆಗಳನ್ನು ಕೂಗುವುದು ಕ್ಷಮಿಸಲಾಗದ ತಪ್ಪಾಗಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ ಸಲಾಂ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು. ಆದರೆ, ಹೆಚ್ಚಿನ ಜನರು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!