ಮಂಗಳೂರು: ಗಾಂಜಾ ಮಾರಾಟ  - ಮೂವರು ಯುವಕರ ಬಂಧನ.!
ರಿಕ್ಷಾದಲ್ಲಿ ಗಾಂಜಾ ಮಾರಾಟ - ಆರೋಪಿಗಳ ಬಂಧನ

ಮಂಗಳೂರು: ಡ್ರಗ್ಸ್ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಬೋಳೂರು ಪರಿಸರದಲ್ಲಿ ಗಾಂಜಾವನ್ನು ರಿಕ್ಷಾದಲ್ಲಿ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರನ್ನು ಬರ್ಕೆ ಪೊಲೀಸ್‌ ಠಾಣೆಯ ಪೊಲೀಸರು ಸೊತ್ತು ಸಹಿತ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ನಗರದ ಬಂದರಿನ ಅಜೀಜುದ್ದೀನ್‌ ರಸ್ತೆಯ ಗಣೇಶ್‌ (28), ಡೊಂಗರಕೇರಿ ಭೋಜರಾವ್‌ ಲೇನ್‌ ನಿವಾಸಿ  ರಾಹುಲ್‌ ಗಟ್ಟಿ (25) ಮತ್ತು ಕುದ್ರೋಳಿಯ ಅಭಿಲಾಷ್‌ ಎಸ್‌. ಕರ್ಕೇರಾ (27) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 2 ಕೆ.ಜಿ. 133 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟಕ್ಕೆ ಬಳಕೆ ಮಾಡಿದ್ದ ಆಟೋ ರಿಕ್ಷಾ ಹಾಗೂ 3 ಮೊಬೈಲ್ ಪೋನ್‌ ಸೇರಿದಂತೆ ಒಟ್ಟು 1, 36,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯಿದೆಯಡಿ ಪ್ರಕರಣದ ದಾಖಲಿಸಿ ತನಿಖೆ ನಡೆಯುತ್ತದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!