ಕಡಬ: ಗೋ ಸಾಗಾಟ - ಆರೋಪಿಗಳು ಪರಾರಿ.!
ಅಕ್ರಮ ಜಾನುವಾರು ಸಾಗಾಟ - ವಾಹನ ಪೊಲೀಸ್ ವಶ

ಕಡಬ : ಅಕ್ರಮವಾಗಿ ಜಾನುವಾರುಗಳ ಸಾಗಾಟ ಮಾಡುತ್ತಿದ್ದ ವಾಹನವನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐವತ್ತೊಕ್ಲು ಗ್ರಾಮದ ಕುಳ್ಳಕೋಡಿ ಎಂಬಲ್ಲಿ 5 ಜಾನುವಾರುಗಳ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ರಸ್ತೆಯಲ್ಲಿ ಸಿಲುಕಿ ಮುಂದಕ್ಕೆ ಹೋಗದೆ ಬಾಕಿಯಾಗಿತ್ತು ಎನ್ನಲಾಗಿದೆ. ಬಳಿಕ ಪಿಕಪ್ ನಲ್ಲಿ ಇದ್ದವರು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.ಈ ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಾನುವಾರುಗಳಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ರೂ 20,000/- ಮೌಲ್ಯದ ಜಾನುವಾರುಗಳನ್ನು ಹಾಗೂ ಅಂದಾಜು ರೂ 2,00,000/ ಮೌಲ್ಯದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 69/2023 ಕಲಂ: 379 ಐಪಿಸಿ ಮತ್ತು ಕಲಂ: 5,6,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಯಂತೆ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!