ಮಂಗಳೂರು: ಮಸಾಜ್ ಹೆಸರಲ್ಲಿ ಅನೈತಿಕ ದಂಧೆ ವಿರುದ್ಧ ಸಮರ ಸಾರಿದ ಪೊಲೀಸ್ ಇಲಾಖೆ.!
ಸೆಲೂನ್‌ಗಳಲ್ಲಿ ಹಸಿಮಾಂಸ ದಂಧೆ..!
ಖಡಕ್ ಕ್ರಮಕ್ಕೆ ಮುಂದಾದ ಕಮಿಷನರ್ ನಡೆಗೆ ಮೆಚ್ಚುಗೆ

ಮಂಗಳೂರು:  ನಗರದಲ್ಲಿ ಅನೈತಿಕ ಚಟುವಟಿಕೆ ದಿನೇ ದಿನೇ ಹೆಚ್ಚುತ್ತಿರುವ ಸಮಯದಲ್ಲಿ ಪೊಲೀಸ್ ಕಮಿಷನರ್ ನೇತೃತ್ವದ ತಂಡ ಮಸಾಜ್ ಪಾರ್ಲರ್ ಹೆಸರಿನ ಅಕ್ರಮ ದಂಧೆಗೆ ದಾಳಿ ನಡೆಸಿ ಕ್ರಮ ಜರಗಿಸಿ ಎಚ್ಚರಿಕೆ ನೀಡಿರುವ  ಶ್ಲಾಘನೀಯ ಘಟನೆಯೊಂದು ನಡೆದಿದೆ.

ನಮ್ಮ ಮಾಧ್ಯಮದ ನಿರಂತರ ವರದಿಗೆ ಸ್ಪಂದಿಸಿ ಕ್ರಮ ಕೈಗೊಂಡಿರುವ ಮಂಗಳೂರಿನ ಹೆಮ್ಮೆಯ ಕಮೀಷನರ್ ಅನುಪಮ್ ಅಗರ್ವಾಲ್ ಅವರಿಗೆ ನಮ್ಮ ದಕ್ಷ ನ್ಯೂಸ್ ನಿಂದ ಧನ್ಯವಾದಗಳು...

ಹೌದು ಮಂಗಳೂರಿನಲ್ಲಿ ಯುನಿಸೆಕ್ಸ್ ಸೆಲೂನ್ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ವಿಚಾರ ನಮ್ಮ ಮಾಧ್ಯಮದಲ್ಲಿ ಸಾಕ್ಷಿ ಸಮೇತ ವರದಿ ಕೂಡ ಮಾಡಲಾಗಿತ್ತು, ಜೊತೆಗೆ ಸಾರ್ವಜನಿಕವಾಗಿ ಈ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಕೆಲವೊಂದು ಸಲೂನ್ ಹೆಸರಲ್ಲಿ ಇಂತಹ ಕೆಟ್ಟ ದಂಧೆಗೆ ಕೈ ಹಾಕಿ ಮಂಗಳೂರಿನ ಹೆಸರು ಕೆಡಿಸುತ್ತಿದ್ದರು.

ಸದ್ಯ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಅಕ್ರಮದ ಬಗ್ಗೆ ತಿಳಿಯುತ್ತಿದ್ದಂತೆ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್‌ವಾಲ್ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಹಲವು ಕಡೆ ದಾಳಿ ನಡೆಸಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಇರುವ ಯುನಿಸೆಕ್ಸ್ ಸೆಲೂನ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿರುವ ಕೆಲವು ಯುನಿಸೆಕ್ಸ್ ಸೆಲೂನ್‌ಗಳು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಗರದ ಸೆಲೂನ್‌ಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಸೆಲೂನ್ ಮಾಲಕರು ತಮ್ಮ ಕೆಲಸಗಾರರ ಬಗ್ಗೆ ಪೊಲೀಸ್ ದೃಢೀಕರಣ ಪಡೆಯಬೇಕು. ಎಲ್ಲ ಗ್ರಾಹಕರ ಮಾಹಿತಿ ದಾಖಲಿಸಿಕೊಳ್ಳಬೇಕು. ಇಲ್ಲವಾದರಲ್ಲಿ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಸದ್ಯ ಅಕ್ರಮದ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದಾಳಿ ನಡೆಸಿ ಎಚ್ಚರಿಕೆ ನೀಡಿರುವುದು ಸ್ವಾಗತಾರ್ಹ ಹಾಗೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ.  ಮತ್ತೊಂದು ವಿಚಾರವೇನೆಂದರೆ ಎಲ್ಲಾ ಮಸಾಜ್ ಪಾರ್ಲರ್ ಗಳಲ್ಲಿ ಈ ರೀತಿಯ ದಂಧೆ ನಡೆಸುತ್ತಿಲ್ಲ ಎಂದು ಕೂಡ ತಿಳಿದುಬಂದಿದೆ.. ಮಂಗಳೂರಿನಲ್ಲಿರುವ ಕಾರ್ಯಾಚರಿಸುತ್ತಿರುವ  ಮಸಾಜ್ ಪಾರ್ಲರ್ ಗಳ ಪೈಕಿ ಕೆಲವೊಂದು ಮಸಾಜ್ ಪಾರ್ಲರ್ ಗಳಲ್ಲಿ ಮಾತ್ರ ಈ ದಂಧೆ ನಡೆಯುತ್ತಿತ್ತು... ಅದು ಬಿಟ್ಟು ಉಳಿದ ಪಾರ್ಲರ್ ಗಳು ಸಲೂನ್ ಗಳಾಗಿಯೇ ಉಳಿದಿದೆ ಎನ್ನುವುದು ಸ್ಪಷ್ಟ.

ಇಂತಹ ಅಕ್ರಮಗಳು ಯಾವತ್ತೂ ತಲೆ ಎತ್ತಬಾರದು ಹಾಗೂ ಇದೇ ರೀತಿ ದಿಟ್ಟ ಹೆಜ್ಜೆ ಮೂಲಕ ಅಕ್ರಮಗಳಿಗೆ ತಡೆ ಹಾಕುವ ನಿಮ್ಮ ಕಾರ್ಯ ಸದಾ ಮುಂದುವರಿಯಲಿ ಎನ್ನುವುದು ನಮ್ಮ ಆಶಯ. ಮಂಗಳೂರು ಕಮೀಷನರ್ ಕೈಗೊಂಡ ಕ್ರಮದ ಬಗ್ಗೆ ಎಲ್ಲಾ ಜನರು ಮೆಚ್ಚುಗೆ ಪಡುತ್ತಿದ್ದು, ಇನ್ನು ಮುಂದೆಯೂ ಕೂಡಾ ಇದೇ ರೀತಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಮಂಗಳೂರು ಒಂದು ಸುಂದರ ಮಾದರಿ ಜಿಲ್ಲೆಯಾಗಲಿ ಎನ್ನುವುದು ಮಂಗಳೂರಿನ ಜನತೆಯ ಮಾತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!