ಮೂಡಬಿದಿರೆ: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರು ಅರೆಸ್ಟ್.!
ಗಾಂಜಾ ಮಾರಾಟ
ಅಯಾನ್, ಫರ್ಹಾನ್, ಜುಬೈರ್ ಬಂಧನ

ಮೂಡಬಿದಿರೆ: ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಯುವಕರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ಬುಧವಾರ ವಶಕ್ಕೆ ಪಡೆದಿದೆ.

ಬೆಳುವಾಯಿ ನಿವಾಸಿಗಳಾದ ಮಹಮ್ಮದ್ ಅಯಾನ್ (22), ಫರ್ಹಾನ್ ಖಾನ್ (18) ಹಾಗೂ ಶೇಖ್ ಮುಹಮ್ಮದ್ ಜುಬೈರ್ (19) ಬಂಧಿತ ಆರೋಪಿಗಳು.

ಮೂವರು ಆರೋಪಿಗಳು ಬೆಳುವಾಯಿ ಕಾಂತಾವಾರ ದ್ವಾರದ ಬಳಿ ಸ್ಕೂಟರ್ ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದ ಖಚಿತ ಮಾಹಿತಿಯನ್ನು ಮೇರೆಗೆ ಸ್ಥಳಕ್ಕೆ ಧಾವಿಸಿದ್ದಾರೆ.

ಬಳಿಕ ಮೂವರು ವ್ಯಕ್ತಿಗಳ ಸಹಿತ 800 ಗ್ರಾಂ ಗಾಂಜಾ ಮತ್ತು ಸ್ಕೂಟರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 62,000 ಆಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!