ಮಂಗಳೂರು: ಕುಖ್ಯಾತ ಅಂತರ್‌ ಜಿಲ್ಲೆ ದರೋಡೆಕೋರರ ಬಂಧನ.!
ದರೋಡೆ, ಕಳ್ಳತನ - ಅಂತರ್ ಜಿಲ್ಲಾ ಐವರು ಆರೋಪಿಗಳ ಬಂಧನ

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮತ್ತು ಕಳವು ಮಾಡಿದ್ದ ಐವರು ಆರೋಪಿಗಳ ಸಹಿತ 7.63 ಲಕ್ಷ ರೂ‌. ಮೊತ್ತದ ಸೊತ್ತುಗಳನ್ನು ಮುಲ್ಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ದಾವಣಗೆರೆ ಜಿಲ್ಲೆಯವರಾಗಿದ್ದು, ಹೊನ್ನೂರು ಮಲಟ್ಟೆ ಹಳ್ಳಿ ಬಾಪೂಜಿ ಬಡಾವಣೆ ನಿವಾಸಿಗಳಾದ ರಘು ಎಸ್.(30), ಮಂಜುನಾಥ (28), ವಿನೋಬ ನಗರ ನಿವಾಸಿ ಪ್ರಮೋದ್ ವಿ.(23), ಆವರಗೇರಿ, ಗೋಶಾಲೆ ನಿವಾಸಿ ಎಚ್.ರವಿಕಿರಣ್ (23) ಆವರಗೆರೆ ನಿವಾಸಿ ದವಲ ಸಾಬ್ (23), ಮಾಳಶೆಟ್ಟಿ ಗ್ರಾಮದ ಹೊನ್ನೂರು ನಿವಾಸಿ ಮಂಜುನಾಥ (29) ಬಂಧಿತರು.

ಆರೋಪಿಗಳಿಂದ ಕಳವು ಮಾಡಿದ್ದ ಒಂದು ಹೋಂಡಾ, 1 ರಾಯಲ್‌ ಎನ್ ಫೀಲ್ಡ್, 1 ಕಾರು ಮತ್ತು ಕರಿಮಣಿ ಸರ ಸೇರಿ ಒಟ್ಟು 7.63 ಲಕ್ಷ ರೂ.‌ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಪೈಕಿ ಮೂವರನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದು, ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 17, 2023 ರಂದು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಚಂದ್ರಮೌಳೇಶ್ವರ ರಸ್ತೆಯಲ್ಲಿ ವಾಸವಾಗಿರುವ ವಾಸಂತಿ ಶೆಟ್ಟಿ ಎಂಬುವವರ ಚಿನ್ನದ ಸರವನ್ನು ಕಳವು ಮಾಡಲಾಗಿತ್ತು. ಅದೇ ದಿನ ಚಂದ್ರಮೌಳೇಶ್ವರ ಬಸ್ ನಿಲ್ದಾಣದ ಬಳಿ ಸೂರ್ಯಪ್ರಕಾಶ ಎನ್ ಎಂಬವರು ನಿಲ್ಲಿಸಿದ್ದ ಕೆಎ-19-ಇಸಿ-2398 ರ ನೋಂದಣಿ ಸಂಖ್ಯೆಯಲ್ಲಿರುವ ಬಜಾಜ್ ಡಿಸ್ಕವರಿ ಬೈಕ್ ಅನ್ನು ಸಹ ಕಳವು ಮಾಡಲಾಗಿದೆ. ಎರಡೂ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಉತ್ತರ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಮುಲ್ಕಿ ಠಾಣೆ ಪಿಐ ವಿದ್ಯಾಧರ್ ಡಿ ಬೈಕೇರಿಕರ್, ಪಿಎಸ್ ಐ ವಿನಾಯಕ ಬಾವಿಕಟ್ಟೆ, ಮಾರುತಿ ಪಿ, ಎಎಸ್ ಐ ಸಂಜೀವ, ಉಮೇಶ್, ಸುರೇಶ್ ಕುಂದರ್, ಎಚ್ ಸಿ ಕಿಶೋರ್ ಕುಮಾರ್, ಶಶಿಧರ್, ಮಹೇಶ್, ಪ್ರಮೋದ್, ಚಂದ್ರಶೇಖರ್, ವಿಶ್ವನಾಥ್, ಬಂಧಿತ ಆರೋಪಿಗಳು. ಉದಯ, ಜಯರಾಂ, ಸತೀಶ್, ಪವನ್, ಪಿಸಿಗಳಾದ ಅರುಣ್ ಕುಮಾರ್, ವಾಸುದೇವ್, ವಿನಾಯಕ, ಶಂಕರ್, ಚಿತ್ರಾ, ಚೆಲುವರಾಜ್, ಶೇಖರ್, ಯಶವಂತ್, ಬಸವರಾಜ್, ಸುರೇಂದ್ರ, ಆಂಜಿನಪ್ಪ, ಇಮಾಮ್, ಶರಣಪ್ಪ, ಅವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳು ಆರೋಪಿಗಳ ಬಂಧನ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!