ಕಾಸರಗೋಡು: 20 ಪ್ರಕರಣಗಳಲ್ಲಿ ಭಾಗಿಯಾದ ಬಂಟ್ವಾಳ ಮೂಲದ ವ್ಯಕ್ತಿ ಅರೆಸ್ಟ್
ಚಿನ್ನದ ಸರ ಕಸಿದು ಪರಾರಿ ಪ್ರಕರಣ - ಮತ್ತೊಬ್ಬ ಆರೋಪಿ ಅರೆಸ್ಟ್‌

ಕಾಸರಗೋಡು: ಬೈಕ್ ನಲ್ಲಿ ಬಂದು ಕೃಷಿಕರೋರ್ವರ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ. ಬಂಟ್ವಾಳ ಬಿ. ಸಿ ರೋಡ್ ಶಾಂತಿಯಂಗಡಿಯ ಮುಹಮ್ಮದ್ ಅಲಿ ( 33) ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಉಳ್ಳಾಲ ಮೂಲದ ಮುಹಮ್ಮದ್ ಸುಹೈಲ್ ನನ್ನು ನಾಲ್ಕು ದಿನಗಳ ಹಿಂದೆ ಬಂಧಿಸಲಾಗಿತ್ತು. 

ಕುಂಬಳೆ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಶಾಂತಿಯಂಗಡಿಯ ಮನೆಯಿಂದ ಆರೋಪಿ ಮುಹಮ್ಮದ್ ಅಲಿಯನ್ನು ಬಂಧಿಸಲಾಗಿದೆ. ಈತನ ವಿರುದ್ಧ ಕುಂಬಳೆ, ಬದಿಯಡ್ಕ, ನೀಲೇಶ್ವರ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಕ್ಕೂ ಅಧಿಕ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿದೆ. 

ಏಪ್ರಿಲ್ 27 ರಂದು ಪೈವಳಿಕೆ- ಚೇವಾರ್ ರಸ್ತೆಯ ಕಟ್ಟದಮನೆಯ ಗೋಪಾಲಕೃಷ್ಣ ಭಟ್ ರವರ ಕತ್ತಿನಿಂದ ಎರಡೂವರೆ ಪವನ್ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಸಿದು ಪರಾರಿಯಾಗಿದ್ದರು. ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು.

ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಎರಡನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!