ವಿದ್ಯುತ್​ ಸ್ಪರ್ಶಿಸಿ ಪ್ರಭಾಸ್​ ಅಭಿಮಾನಿ ಸಾವು; ‘ಸಲಾರ್​’ ಬಿಡುಗಡೆ ಖುಷಿಯ ನಡುವೆ ಕಹಿ ಸುದ್ದಿ
ವಿದ್ಯುತ್​ ಸ್ಪರ್ಶಿಸಿ ಪ್ರಭಾಸ್​ ಅಭಿಮಾನಿ ಸಾವು; ‘ಸಲಾರ್​’ ಬಿಡುಗಡೆ ಖುಷಿಯ ನಡುವೆ ಕಹಿ ಸುದ್ದಿ

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸಲಾರ್ ಸಿನಿಮಾದ ಫ್ಲೆಕ್ಸ್ ಹಾಕುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಅಭಿಮಾನಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದ ಬಾಲರಾಜು ಎಂದು ಗುರುತಿಸಲಾಗಿದೆ.

ಬಾಲರಾಜು ಅವರು ತಮ್ಮ ನೆಚ್ಚಿನ ನಟ ಪ್ರಭಾಸ್​ ಅಭಿನಯದ ‘ಸಲಾರ್’ ಚಿತ್ರ ನೋಡಲು ಕಾದಿದ್ದರು. ಅವರ ಸ್ನೇಹಿತರು ಫ್ಲೆಕ್ಸ್​ ಫ್ರೇಮ್ ಮಾಡಿ ತೊಳೆದಾಗ ಫ್ರೇಮ್‌ನ ಕಬ್ಬಿಣದ ರಾಡ್ ಮನೆಯ ವಿದ್ಯುತ್​ ವೈರ್‌ಗಳಿಗೆ ತಗುಲಿದಾಗ ಅವಘಡ ಸಂಭವಿಸಿದೆ. ಇದರಲ್ಲಿ ಬಾಲರಾಜು ಸಾವನ್ನಪ್ಪಿದ್ದಾರೆ. ಗಜೇಂದ್ರ ಎಂಬ ಯುವಕ ಗಾಯಗೊಂಡಿದ್ದಾನೆ.

ಬಾಲರಾಜುಗೆ 27 ವರ್ಷ ವಯಸ್ಸಾಗಿದ್ದು ಪತ್ನಿ ಸಿರಿಶಾ ಮತ್ತು ಇಬ್ಬರು ಪುತ್ರರನ್ನು ಅಗಲಿಸಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮವರಂ ಪೊಲೀಸರು ಆಗಮಿಸಿ, ಪರಿಶೀಲನೆ ಮಾಡಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ. ನಿನ್ನೆ ರಾತ್ರಿಯೇ ಈ ಅವ‍ಘಡ ನಡೆದಿದ್ದು, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಕುಟುಂಬಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ.

ಬಾಲರಾಜು ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ನಿನ್ನೆ ರಾತ್ರಿ ಮೃತನ ಸಂಬಂಧಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ವಿದ್ಯುತ್​ ವೈರ್​ಗಳು ಕಡಿಮೆ ಎತ್ತರದಲ್ಲಿ ಇದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಬಾಲರಾಜು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಅಲ್ಲಿಂದ ಕಳುಹಿಸಿದರು. ಬಾಲರಾಜು ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!