ಮತ್ತೆ ವಿಭಿನ್ನ ಶೈಲಿಯಲ್ಲಿ ರಾಜ್ ಬಿ.ಶೆಟ್ಟಿ.!
ನಟ ರಾಜ್ ಬಿ ಶೆಟ್ಟಿ ಅವರ ಸಿನಿಮಾ ಅಂದರೆನೆ ವಿಶೇಷ. ಹಲವು ಸಿನಿಮಾ ಮೂಲಕ ವಿಭಿನ್ನವಾಗಿ ತೆರೆ ಮೇಲೆ ಕಾಣಿಸಿಕೊಂಡು ಸಿನಿರಸಿಕರ ಮನ ಗೆದ್ದ ಶೆಟ್ರು ಇದೀಗ ಹೊಸ ಸಿನಿಮಾ ಅನೌನ್ಸ್ ಮಾಡಿ ಕೂತೂಹಲ ಹೆಚ್ಚಿಸಿದ್ದಾರೆ. ಮಾರಿ..ಮಾರಿ..ಮಾರಿಗೆ ದಾರಿ ಎಂದು ಹೆಸರಿನ ಮೂಲಕವೇ ಸಿನಿಮಾ ಹೇಗಿರಲಿದೆ ಎನ್ನುವ ಕಾತರ ಹೆಚ್ಚಿಸಿದ್ದಾರೆ.
"ಟೋಬಿ" ಆಗಸ್ಟ್ 25ರಂದು ನಿಮ್ಮ ಮುಂದೆ ಎಂಬ ಸುದ್ದಿಯನ್ನು ರಾಜ್ ಬಿ ಶೆಟ್ಟಿ ಟೀಸರ್ ಮೂಲಕ ಹಂಚಿಕೊಂಡಿದ್ದಾರೆ.
ಇನ್ನು ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರಾಜ್ ಬಿ. ಶೆಟ್ಟಿ ಇದೀಗ ಟೋಬಿ ಮೂಲಕ ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಟೋಬಿ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ಸೇರಿದಂತೆ ಕಲಾವಿದರ ದಂಡೂ ಇದ್ದು, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಸಿನೆಮಾದ ಮುಂದಿನ ಹೊಸ ಆಪ್ಡೇಟ್ಗಾಗಿ ಅಭಿಮಾನಿಗಳು, ಸಿನಿರಸಿಕರು ಕಾಯುತ್ತಿದ್ದಾರೆ.
Comments
0 comment