ಮಂಗಳೂರು: ಬಗೆದಷ್ಟು ಬಯಲಾಗುತ್ತಿದೆ ಮಸಾಜ್ ಪಾರ್ಲರ್ ನ ಕರಾಳ ಮುಖ...!?
ಒಳಗಡೆ ನಡೆಯೋದೆ ಬೇರೆ.? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಮಂಗಳೂರು: ಹೊರಗಡೆಯಿಂದ ಸ್ಪಾ, ಸಲೂನ್, ಮಸಾಜ್ ಪಾರ್ಲರ್ ನಾಮಫಲಕ ಆದರೆ, ಅದರ ಒಳಗಡೆ ನಡೆಯುತ್ತಿರುವ ದಂದೆಯೇ ಬೇರೆಯದಾಗಿದೆ.

ಹೌದು, ಮಂಗಳೂರಿನಲ್ಲಿ ಇಂತಹ ದಂಧೆಗಳು ಅಲ್ಲಲ್ಲಿ ಕಂಡು ಬರುತ್ತಿರುವುದು ಮಂಗಳೂರಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಕೆಲವು ಹೆಣ್ಣು ಮಕ್ಕಳನ್ನು ಮಸಾಜ್ ಮಾಡಲು ಕೆಲಸಕ್ಕೆಂದು ಇಟ್ಟುಕೊಂಡು ಅಲ್ಲಿ ಬಂದ ಗ್ರಾಹಕರ ಜೊತೆ ಲೈಂಗಿಕ ಸಂಪರ್ಕ ನಡೆಸಲು ಅವಕಾಶ ನೀಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಇದನ್ನೆಲ್ಲಾ ಕಾನೂನಿನ ಕಣ್ಣಿಗೆ ಮಣ್ಣೆರಚಿ ನಡೆಸುತ್ತಿರುವುದು ವಿಷಾದನೀಯ ಎಂದರು ತಪ್ಪಾಗದು. ಸಂಭಂದಪಟ್ಟ ಇಲಾಖೆ ಕೂಡ ಇದರ ಬಗ್ಗೆ ಗಮನ ಹರಿಸುವ ಹುಸಾಬರಿಯಲ್ಲೇ ಇಲ್ಲದಾಗಿದೆ.

ಮಂಗಳೂರಿನಲ್ಲಿ 20 ರಿಂದ 25 ಕಡೆಗಳಲ್ಲಿ ಈ ಅಕ್ರಮ ಮಸಾಜ್ ಪಾರ್ಲರ್ ಗಳು ತಲೆ ಎತ್ತಿ ಕಾರ್ಯಚರಿಸುತ್ತಿವೆ ಎನ್ನಲಾಗಿದೆ. ಈ ಪೈಕಿ ನಮ್ಮ ಮಾಧ್ಯಮದ ಕಣ್ಣಿಗೆ ಬಿದ್ದಿರುವ ಕೆಲವೊಂದು ಮಸಾಜ್ ಪಾರ್ಲರ್ ಗಳ ಡೀಟೇಲ್ಸ್ ಇಲ್ಲಿದೆ ನೋಡಿ.

ಬೆಂದುರ್ವೆಲ್ ನ ಎಸ್ಸೆಲ್ ವೆಲ್ಕಾನ್ ಟವರ್, ಬಲ್ಮಠ ಸ್ವಾಗತ್ ಹೋಟೆಲ್ ಮುಂಭಾಗ,ಕೆ.ಎಸ್. ರಾವ್ ರೋಡ್ ಜೋಸ್ ಅಲುಕಾಸ್ ಮೇಲಿನ ಅಂತಸ್ತಿನಲ್ಲಿ, ಪಂಪ್ವೆಲ್ ನ ಲೋಟಸ್ ಬಿಲ್ಡಿಂಗ್, ಕಂಕನಾಡಿ ಗಣೇಶ್ ಮೆಡಿಕಲ್ ಸಮೀಪದ ಶಾಲಿಮಾರ್ ಬಿಲ್ಡಿಂಗ್, ಬಿಜೈ ಸರ್ಕಲ್ ಸಮೀಪದ 2 ಕಟ್ಟಡದಲ್ಲಿ, ಕೊಟ್ಟಾರ ಚೌಕಿ ಸಮೀಪ, ಜ್ಯೋತಿ ಸರ್ಕಲ್ ಬಳಿಯ ಹೆಸರಾಂತ ಇಂಟರ್ ನ್ಯಾಷನಲ್ ಹೋಟೆಲ್ ನ ಕೆಳ ಅಂತಸ್ತು, ತೊಕ್ಕೊಟ್ಟು ಭಾಗದಲ್ಲಿ ಕೂಡ ಈ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ಇಷ್ಟೆಲ್ಲಾ ಮಾಹಿತಿ ನಮ್ಮ ಮಾಧ್ಯಮಕ್ಕೆ ದೊರೆತರೂ ಕೂಡ ಇದನ್ನು ಹತ್ತಿಕ್ಕುವಲ್ಲಿ ಇಲಾಖೆಯ ನಡತೆ ಕುಂಠಿತವಾಗಿರುವುದು ಜನರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನಾದರೂ ಇಂತಹ ಅಕ್ರಮ ಮಸಾಜ್ ಪಾರ್ಲರ್ ಗಳ ಹೆಡೆಮುರಿ ಕಟ್ಟಿ ಮಂಗಳೂರನ್ನು ಅಕ್ರಮ ರಹಿತವಾಗಿ ಮಾಡಬೇಕೆಂದು ನಮ್ಮ ಆಶಯ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!