ಶಂಕಿತ ಭಯೋತ್ಪಾದಕರ ಬಂಧನ ಬಳಿಕ ಕರಾವಳಿಯಲ್ಲಿ ಹದ್ದಿನ ಕಣ್ಣಿಟ್ಟ ಪೊಲೀಸರು
ಕರಾವಳಿಗೆ ಬಿದ್ದಿದ್ಯಾ ಭಯೋತ್ಪಾದಕರ ಕಣ್ಣು.! ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ

ಕರಾವಳಿಯಲ್ಲಿ ಭಯೋತ್ಪಾದಕರ ಕಣ್ಣು ಬಿದ್ದಿರುವ ಸಾಧ್ಯತೆ ಇದ್ದು, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುವ ಸಾಧ್ಯೆತೆಯಿರುವ ಕಾರಣ ಕಟ್ಟೆಚ್ಚರ ವಹಿಸಿದ ಪೊಲೀಸರು ಎಲ್ಲಾ ಕಡೆಗಳಲ್ಲು ಹದ್ದಿನ ಕಣ್ಣಿಟ್ಟಿದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ ಬಳಿಕ ಕರಾವಳಿಯಲ್ಲಿ ವಿಧ್ವಂಸಕ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸಿರುವ ಪೊಲೀಸರು ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.

ದೇವಸ್ಥಾನ, ಪ್ರವಾಸಿ ಕೇಂದ್ರ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಶ್ವಾನ ದಳ, ಮಸೂರ ದರ್ಶಕದಿಂದ ತಪಾಸಣೆ ನಡೆಸಲರಾಂಭಿಸಿದ್ದಾರೆ. ಈಗಾಗಲೇ ಉಡುಪಿ ಕೃಷ್ಣ ಮಠ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಆಟಿ ಮಾರಿಪೂಜೆ ಸಂಭ್ರಮದಲ್ಲಿರುವ ಕಾಪುವಿನ ಮೂರೂ ಮಾರಿಗುಡಿ ಸುತ್ತ ತಪಾಸಣೆ ಚುರುಕುಗೊಳಿಸಿದ್ದಾರೆ. ತಪಾಸಣೆ ಕಾರ್ಯ ನಿರಂತರವಾಗಿ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!