ಉಡುಪಿ: ಯುವತಿಯರ ವಿಡಿಯೋ ಪ್ರಕರಣ - ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಹಿಂ.ಜಾ.ವೇ
ದುಷ್ಕೃತ್ಯದ ವಿರುದ್ಧ ಉನ್ನತ ತನಿಖೆ ಹಾಗೂ ಹಿಂದೂ ಯುವತಿಯರಿಗೆ ನ್ಯಾಯ ಬೇಕು - ಹಿಂದೂ ಜಾಗರಣ ವೇದಿಕೆ

ಉಡುಪಿ: ಶೌಚಾಲಯದಲ್ಲಿ ವಿಡಿಯೋ ಮಾಡಿದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಇಲ್ಲವಾದಲ್ಲಿ ಹೋರಾಟದ ಎಚ್ಚರಿಕೆಯನ್ನು ಉಡುಪಿ ಜಿಲ್ಲಾ ಹಿಂದೂ ಜಾಗರಣ ವೇದಿಕೆ ನೀಡಿದೆ.

ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಕಾಲೇಜ್‌ನಲ್ಲಿ ವ್ಯಾಸಂಗ ನಡೆಸುತ್ತಿರುವ ಹಿಂದೂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಕೆಲ ಜಿಹಾದಿ ಶಕ್ತಿಗಳ ಕುಮ್ಮಕ್ಕು ಪಡೆದು ಅಲಿಮತುಲ್ ಶೈಫಾ, ಶಬನಾಜ್ ಹಾಗೂ ಅಲಿಯಾ ಎನ್ನುವ ಮೂವರು ವಿದ್ಯಾರ್ಥಿಗಳು ಗುಪ್ತ ಮೊಬೈಲ್ ಕ್ಯಾಮೆರಾ ಬಳಸಿ ಅವರ ಖಾಸಗಿ ವಿಡಿಯೊವನ್ನು ಸೆರೆಹಿಡಿದ ಆಘಾತಕಾರಿ ಘಟನೆ ನಡೆದಿರುವುದು ಕಳೆದ ವಾರದ ಈಚೆಗೆ ನಡೆದಿದೆ. 

ಒಂದು ವರುಷದ ಹಿಂದೆಯೂ ಕೂಡ ಈ ಮೂವರು ಇದೇ ರೀತಿಯಲ್ಲಿ ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಂಡು ವಿಡಿಯೊ ಸೆರೆ ಹಿಡಿಯುತ್ತಿದ್ದ ಘಟನೆಯೂ ಗಮನಕ್ಕೆ ಬಂದಿದೆ, ಇದರ ಹಿಂದೆ ಜಿಹಾದಿ ಷಡ್ಯಂತ್ರಗಳು ಇರುವ ಗುಮಾನಿ ಇದೆ. ಈಗಾಗಲೇ ಜಿಲ್ಲಾ ಪೋಲಿಸ್ ಇಲಾಖೆ ಆ ಇದರ ಹಿಂದಿರುವ ಮೂವರ ಮೇಲೆ ಸುಮೋಟ್, ಕೇಸು ದಾಖಲಿಸಿಕೊಂಡಿದ್ದರೂ ಜಿಹಾದಿ ಶಕ್ತಿಗಳ ಹುನ್ನಾರ ಏನೆಂಬುದು ಬಯಲಾಗಬೇಕಿದೆ. ಹಾಗಾಗಿ ಈ ದುಷ್ಕೃತ್ಯದ ವಿರುದ್ಧ ಉನ್ನತ ಮಟ್ಟದ ತನಿಖೆಯನ್ನು ನಡೆಸಿ ಹಿಂದೂ ಹೆಣ್ಮಕ್ಕಳಿಗೆ ನ್ಯಾಯ ಕೊಡಿಸಬೇಕೆಂದು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ. ತಪ್ಪಿದಲ್ಲಿ ಜಿಲ್ಲೆಯ ವಿದ್ಯಾರ್ಥಿ ಸಂದೋಹ, ಹಾಗೂ ಹಿಂದೂ ಸಮಾಜವನ್ನು ಸಂಘಟಿಸಿ ತೀವ್ರ ಹೋರಾಟವನ್ನು ಜಾಗರಣ ವೇದಿಕೆ ನಡೆಸುತ್ತದೆ ಎನ್ನುವ ಎಚ್ಚರಿಕೆಯನ್ನೂ ಪತ್ರಿಕಾ ಹೇಳಿಕೆಯ ಮೂಲಕ ನೀಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!