ಮಂಗಳೂರು: ಸರಿಪಲ್ಲದ ಸೌಂದರ್ಯವನ್ನು ಬಗೆಯುತ್ತಿರುವ ಖದೀಮರು
ಪ್ರಕೃತಿ ಅತ್ಯಾಚಾರಕ್ಕೆ ಅಧಿಕಾರಿಗಳೇ ಸಾಥ್.! - ಯಾವೂದೇ ಭಯವಿಲ್ಲದೆ "ದೂಜನ ಗಣಿಗಾರಿಕೆ" ಆರಂಭ

ಮಂಗಳೂರು: ಗಣಿಗಾರಿಕೆ ಹಾವಳಿಯಿಂದ ಗಣಿಗಾರಿಕೆ ನಡೆಯುವ ಅಕ್ಕಪಕ್ಕದ ಗ್ರಾಮಗಳಲ್ಲಿ ಭಾರಿ ಅನಾಹುತಗಳು ಸಂಭವಿಸುತ್ತಿರುವುದರಿ0ದ ಜನ, ಜಾನುವಾರುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗುತ್ತಿದೆ. ಇದು ದೂಜ ಎಂಬಾತ ಸಕ್ರಮ ಎಂದು ಬಿಂಬಿಸಿಕೊ0ಡು, ಅಕ್ರಮವಾಗಿ ನದೆಸುವ ಕಲ್ಲು ಕೋರೆ. ಮಂಗಳೂರು ಹೊರವಲಯದ ನೀರುಮಾರ್ಗದ ಸರಿಪಲ್ಲ ಬಳಿಯ ಕೊಳ್ಚಾರು ಸಮೀಪ ಎಗ್ಗಿಲ್ಲದೆ ನಡೆಯುತ್ತಿದೆ. 

ಜೋಸೆಫ್ ಲೋಬೋ ಅಲಿಯಾಸ್ ದೂಜ ಎಂಬಾತನ ಒಡೆತನದಲ್ಲಿ ದೊಡ್ಡ ಮಟ್ಟದ ಅಕ್ರಮ ಬೆಳಕಿಗೆ ಬಂದಿದೆ. ಈ ಅಕ್ರಮ ಗಣಿಗಾರಿಕೆಯ ಬಗ್ಗೆ ನಾವು ಈ ಮೊದಲು ವರದಿ ಮಾಡಿ ಭಿತ್ತರಿಸಿ ಅಧಿಕಾರಿಗಳ ಕಣ್ತೆರುಸುವ ಪ್ರಯತ್ನ ಮಾಡಿದ್ದೆವು. ಆದರೆ ಅಧಿಕಾರಿಗಳು ಇನ್ನೂ ಕೂಡ ಸುಮ್ಮನೆ ಕುಳಿತಿದ್ದಾರೆ. ಜನರು ದೂರು ನೀಡಿದರು ಯಾವುದೇ ಕ್ರಮವಿಲ್ಲ. ಇಂದು ಕೂಡ ಆ ಜಾಗದಲ್ಲಿ ಎಗ್ಗಿಲ್ಲದೆ ಕೆಲಸ ನಡೆಯುತ್ತಲೇ ಇದೆ. 

ಅಧಿಕಾರಿಗಳಿಗೆ ಸಾಕ್ಷಿ ಸಮೇತ ಮಾಹಿತಿ ನೀಡಿ ಮಾಧ್ಯಮದಲ್ಲಿ ಪ್ರಸಾರ ಮಾಡಿದರೂ ಇಂದು ಮತ್ತೆ ಆ ಜಾಗದಲ್ಲಿ ಅಕ್ರಮ ಮುಂದುವರಿದಿದೆ. ಯಾವುದೇ ಭಯವಿಲ್ಲದೆ ಹೆಚ್ಚುವರಿ ಯಂತ್ರಗಳನ್ನೂ ಇಳಿಸಿ ಆರಾಮವಾಗಿ ನಡೆಸುತ್ತಿದ್ದಾನೆ. ಈ ಅಕ್ರಮದಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎನ್ನುವುದಕ್ಕೆ ಯಾವ ಸಂಶಯವೂ ಇಲ್ಲ. ಅಧಿಕಾರಿಗಳ ಬಳಿ ಈ ಗಣಿಗಾರಿಕೆ ನಡೆಯಲು ಪರ್ಮಿಶನ್ ಇದೆಯಾ ಎಂದು ಕೇಳಿದಾಗ ಇದೆ ಎನ್ನುತ್ತಾರೆ. ದಾಖಲೆ ತೋರಿಸೋಕೆ ಹೇಳಿದ್ರೆ ಅದು ಇದು ನೆಪ ಹೇಳಿ ಜಾರಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಕರೆ ಮಾಡಿ ಸ್ಥಳಕ್ಕೆ ಬನ್ನಿ, ಯಂತ್ರಗಳ ಜೊತೆ ವಾಹನಗಳು ಇವೆ. ಅಕ್ರಮಕ್ಕೆ ಬ್ರೇಕ್ ಹಾಕಿ ಎಂದು ಹೇಳಿದ್ರೆ ಯಾವುದೇ ಉತ್ತರವಿಲ್ಲ. ಒಟ್ಟಾರೆ ಗಣಿ ಧನಿ ನಡೆದುಕೊಳ್ಳುವ ರೀತಿ ಹಾಗೂ ಅಧಿಕಾರಿಗಳ ಜಾಣ ಮೌನಕ್ಕೆ ಮುಂದಿನ ಕ್ರಮ ನಡೆ ಏನು ಎನ್ನುವುದು ಎಲ್ಲರ ಸಂಶಯ. ಹಣದಾಸೆಗೆ ಅಧಿಕಾರಿಗಳೇ ಈ ರೀತಿ ಮಾಡಿದ್ರೆ ಜನರು ಯಾರ ಬಳಿ ಕಷ್ಟ ತೋಡಿಕೊಳ್ಳಬೇಕು.? ಇನ್ನೂ ಈ ಘಟನೆಗೆ ನ್ಯಾಯ ಹೇಗೆ ಸಾಧ್ಯ..? 

ಮೀತಿಮೀರಿ ನಡೆಯುತ್ತಿರುವ ಗಣಿಗಾರಿಕೆಯಿಂದ ದಿನ ಕಳೆದಂತೆ ಪರಿಸರಲ್ಲಿನ ಪ್ರಾಣಿ ಪಕ್ಷಿಗಳಿಗೆ ಮಾತ್ರವಲ್ಲದೆ ಸುಂದರವಾದ ಪ್ರಕೃತಿ ಕೂಡ ನಶಿಸಿ ಹೋಗುತ್ತಿದೆ. ಹಣವಂತರ ಲಾಭಿಯಿಂದ ನಡೆಯುತ್ತಿರುವ ಈ ಗಣಿಗಾರಿಕೆಗೆ ಯಾವುದೇ ತರಹದ ಲೀಸ್ ಪಡೆದಿಲ್ಲ. ಅಸಲಿಗೆ ಎಲ್ಲರ ಬಳಿಯೂ ತನ್ನ ಸ್ವಂತ ಜಾಗದಲ್ಲೇ ತಾನು ಗಣಿಗಾರಿಕೆ ಮಾಡುವುದು ಎಂದು ಹೇಳುತ್ತಾರೆ. ಹಣ ಕೊಟ್ಟರೆ ಏನು ಬೇಕಾದ್ರೂ ನಡೆಯುತ್ತೆ ಅನ್ನೋ ರೀತಿಯಲ್ಲಿ ಇದರ ಮಾಲೀಕ ದರ್ಪ ಮೆರೆದಿದ್ದಾನೆ. ಬಿಜೆಪಿ ಇರ್ಲಿ, ಕಾಂಗ್ರೆಸ್ ಸರ್ಕಾರ ಬರಲಿ. ನನ್ನನ್ನು ಮಾತ್ರ ತಡೆಯೋಕೆ ಸಾಧ್ಯವಿಲ್ಲ. ಎಲ್ಲರೂ ನಾನು ಹೇಳಿದ ಹಾಗೆ ಇದ್ದಾರೆ ಎಂದು ದರ್ಪ ಮೆರೆದಿರುವ ಘಟನೆಯೂ ನಡೆದಿದೆ.

ಅಷ್ಟು ಮಾತ್ರವಲ್ಲದೆ ಸ್ಥಳೀಯರ ಪ್ರಕಾರ ಈ ಕೆಂಪುಕಲ್ಲು ಗಣಿಗಾರಿಕೆ ಕಳೆದ ಏಳು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ದಾಖಲೆಗಳು ಇದ್ದುಕೊಂಡೆ ಗಣಿಗಾರಿಕೆ ನಡೆಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಇವರ ಬಂಡವಾಳ ಸ್ಥಳಕ್ಕೆ ಭೇಟಿ ಕೊಟ್ಟಾಗ ಬಯಲಾಗಿದೆ. ಜಾಗವನ್ನು ಸಮತಟ್ಟು ಮಾಡೋದಕ್ಕೆಂದು ದಾಖಲೆ ಸೃಷ್ಟಿಸಿ ಅಕ್ರಮ ಮಾಡುತ್ತಿದ್ದಾನೆ. ಇದರ ಹಿಂದೆ ಪಿಡಿಓ, ಗ್ರಾಮ ಪಂಚಾಯತ್ ಸೇರಿದಂತೆ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಶಾಮೀಲಾಗಿದೆ. ಅನುಮತಿ ಕೊಡುವ ಇವರಿಗೆಲ್ಲಾ ಕರೆ ಮಾಡಿದ್ರೆ ಕರೆ ಸ್ವೀಕರಿಸದೆ ಇರುವುದು, ಅಸ್ಪಷ್ಟ ಮಾಹಿತಿ ನೀಡುವುದು ಸ್ಥಳಕ್ಕೆ ಬಾರದೇ ಇರುವುದು ಶಾಮೀಲಾಗಿರುವುದಕ್ಕೆ ಪುಷ್ಟಿ ನೀಡಿದೆ. 

ಈ ಹಿಂದೆ ಸರಿಪಲ್ಲ ಸುಂದರ ಪ್ರಕೃತಿ ತಾಣವಾಗಿತ್ತು. ಹಸಿರಿನಿಂದ ತುಂಬಿ ತುಳುಕುತ್ತಿದ್ದ ಜಾಗ ಈಗ ಧೂಳುಮಯ ವಾತವರಣವಾಗಿ ಮಾರ್ಪಟ್ಟಿದೆ. ರಸ್ತೆಯುದ್ದಕ್ಕೂ ಧೂಳು, ರಸ್ತೆಗಳು ಹಾಳಾಗಿದೆ. ರಸ್ತೆ ಪಕ್ಕದಲ್ಲಿಯೇ ಇರುವ ಮನೆಯೊಳಗೆ ಧೂಳು ಹೋಗುತ್ತಿದೆ. ಮನೆ ಮಂದಿ ಈ ಧೂಳಿನಿಂದ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಪ್ರಕೃತಿ ನಾಶದ ಜೊತೆಗೆ, ಊರಿನ ನೂರಾರು ಮಂದಿಗೆ ತೊಂದರೆ ಕೊಟ್ಟು ತಾನು ಕೋಟಿಗಟ್ಟಲೆ ಆಸ್ತಿ ಸಂಪಾದನೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕೃತಿ ಇದ್ದರಷ್ಟೇ ಬದುಕು ಇಲ್ಲವಾದರೆ ಪರಿಣಾಮ ವಿನಾಶ ಮಾತ್ರ ಎನ್ನುವುದು ಗೊತ್ತಿರುವ ವಿಚಾರವಾದರೂ ಹೀಗೆ ಪ್ರಕೃತಿ ನಾಶ ಮಾಡುತ್ತಿರುವುದನ್ನು ಯಾರು ಏಕೆ ಪ್ರಶ್ನಿಸಲ್ಲ.!? ಅಥವಾ ಈತನ ಪ್ರಭಾವವನ್ನು ತಡೆಯೋಕೆ ಸಾಧ್ಯವಿಲ್ವಾ..? ಅಕ್ರಮದೊಂದಿಗೆ ಅಧಿಕಾರಿಗಳೇ ಕೈಜೋಡಿಸಿರುವಾಗ ನ್ಯಾಯ ಹೇಗೆ ಸಾಧ್ಯ. ಜನರು ನ್ಯಾಯವನ್ನರಸಿ ಇನ್ನೆಲ್ಲಿಗೆ ಹೋಗೋದು ಅನ್ನುವ ಪ್ರಶ್ನೆಗಳು ಪಶ್ನೆಯಾಗಿಯೇ ಉಳಿದಿದೆ. ಅಧಿಕಾರಿಗಳಿಗೆ ಸಾಕ್ಷಿ ಸಮೇತ ಮಾಹಿತಿ ನೀಡಿದರೂ ಇಂದು ಯಾವುದೇ ಭಯವಿಲ್ಲದೆ ಅಕ್ರಮ ಪ್ರಾರಂಭವಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!