ಬಂಟ್ವಾಳ: ಪಪ್ಪಾಯ ತಿಂದು ಯುವತಿ ಅಸ್ವಸ್ಥ - ಡೆಂಗ್ಯೂಗೆ ಬಲಿ ಎಂದ ಆರೋಗ್ಯ ಇಲಾಖೆ.?
ಚಿಕಿತ್ಸೆ ಫಲಕಾರಿಯಾಗದೆ ಯುವತಿ ದುರ್ಮರಣ

ಬಂಟ್ವಾಳ: ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ಡೆಂಗ್ಯೂಗೆ ಬಲಿಯಾಗಿದ್ದಾಳೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಬಂಟ್ವಾಳ ತಾಲೂಕಿನ ಪೆರುವಾಯಿ ಮುಕ್ಕುಡಾಪು ನಿವಾಸಿ ಆಶಾ (20) ಮೃತಪಟ್ಟವಳು. ಮನೆಯಲ್ಲಿ ಹಸಿ ಪಪ್ಪಾಯ ತಿಂದು ತೀವ್ರವಾಗಿ ಅಸ್ವಸ್ಥಳಾಗಿದ್ದಳು. ಈ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ.

ಜ್ವರ ಬಂದು ಕಡಿಮೆಯಾಗಿದ್ದು, ಶನಿವಾರ ಮನೆಯಲ್ಲಿ ಹಸಿ ಪಪ್ಪಾಯಿಯನ್ನು ತಿಂದು ವಾಂತಿ ಹಾಗೂ ಅಲರ್ಜಿಗೊಳಗಾಗಿದ್ದಾಳೆ. ಪುತ್ತೂರು ಆಸ್ಪತ್ರೆಗೆ ಹೋಗುವ ಸಂದರ್ಭ ಕೋಮಾಕ್ಕೆ ಜಾರಿದ್ದು, ಅಲ್ಲಿಂದ ಮಂಗಳೂರಿಗೆ ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಈ ಸಂದರ್ಭ ಮುಖ ಊದಿಕೊಂಡಿತ್ತೆನ್ನಲಾಗಿದೆ.

ಮAಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಮಂಗಳವಾರ ಮೃತಪಟ್ಟಿದ್ದಾಳೆ. ಈ ಸಂದರ್ಭ ಡೆಂಗ್ಯು ದೃಢವಾಗಿದ್ದರಿಂದ ಅದರಿಂದಲೇ ಮೃತ ಪಟ್ಟಿರುವ ಸಾಧ್ಯತೆಯನ್ನು ಆರೋಗ್ಯ ಇಲಾಖೆ ಹೇಳಿದೆ. ಕೆಲಸವನ್ನು ಮಂಗಳೂರಿನಲ್ಲಿ ಮಾಡುತ್ತಿದ್ದ ಕಾರಣ ಅಲ್ಲೇ ಡೆಂಗ್ಯು ಜ್ವರ ತಗುಲಿರುವ ಸಾಧ್ಯತೆಯಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!