ಉಡುಪಿಯ ತಾಯಿ ಮಗಳ ಸಾಹಸ - ಜಗತ್ತಿನ ತುತ್ತುದಿಗೆ ಪ್ರಯಾಣ
ಬೈಕ್‌‌ನಲ್ಲಿ ತಾಯಿ ಮಗಳ ಸಾಹಸ - ಜಗತ್ತಿನ ತುತ್ತುದಿಗೆ ಪ್ರಯಾಣ

ಸಮುದ್ರಮಟ್ಟಕ್ಕಿಂತ ಸುಮಾರು 19,024 ಅಡಿ ಎತ್ತರದಲ್ಲಿರುವ, ಇಂಡೋ, ಚೈನಾ ಬಾರ್ಡರ್​ಗೆ ತಾಗಿಕೊಂಡಿರುವ ಜಗತ್ತಿನ ಅತಿ ಎತ್ತರದ ಪ್ರದೇಶ ಉಮ್ಲಿಂಗ್ಲಾ ಪಾಸ್​ಗೆ ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ ಬೈಕ್​ ಮೂಲಕ ತೆರಳಿ ಸಾಹಸ ಪ್ರದರ್ಶಿಸಿದ್ದಾರೆ.

55ರ ಹರೆಯದ ವಿಲ್ಮಾ ಅವರಿಗೆ ಈ ಬಾರಿ ತಮ್ಮ ಮಗಳು ಚೆರಿಶ್​ ಕರ್ವಾಲೋ ಸಾಹಸಯಾತ್ರೆಯಲ್ಲಿ ಜೊತೆಯಾಗಿದ್ದಾರೆ. ಇವರು ಈ ಹಿಂದೆ ಜಗತ್ತಿನ ಎರಡನೇ ಎತ್ತರದ ಪ್ರದೇಶ ಖದುಂರ್ಗ್ಲಾ ಪಾಸ್​ಗೆ ಬೈಕ್​ ಮೂಲಕ ಹೋಗಿ ಸುದ್ದಿ ಮಾಡಿದ್ದರು.

ಲಡಾಕ್​ ಪ್ರಾಂತ್ಯದ ಉಮ್ಲಿಂಗ್ಲಾ ಪಾಸ್​ ಬೆಟ್ಟಗುಡ್ಡಗಳಿಂದ ತುಂಬಿದ್ದು ಸಾಹಸಿ ರೈಡರ್​ ಗಳಿಗೆ ಮಾತ್ರ ಇಲ್ಲಿಗೆ ತಲುಪಲು ಸಾಧ್ಯ. ಲಡಾಕ್​ ಗೆ ಒಂದು ಬಾರಿ ರೈಡ್​ ಮಾಡಿ ಹೋಗುವುದೇ ಕಷ್ಟ ಅಂಥದ್ದರಲ್ಲಿ ವಿಲ್ಮಾ ಅವರು ಲಡಾಕ್​ ಗೆ ಮೂರನೇ ಬಾರಿ ಬೈಕ್​ ರೈಡ್​ ಮಾಡಿದ್ದಾರೆ.

ಯೋಗ ,ಪ್ರಾಣಾಯಾಮ,ಧ್ಯಾನ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಇವರು ವೃತ್ತಿಯಲ್ಲಿ ಕಾರ್ಪೊರೇಟರ್​ ಟ್ರೈನರ್​. ಫಿಟ್ನೆಸ್​ ಕಾಯ್ದಿರಿಸಿಕೊಂಡು, ಸಾಹಸಗಳ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಸದ್ಯ ಇವರು ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!