ಬಂಟ್ವಾಳ: ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಖಡಕ್ ವಾರ್ನಿಂಗ್ ಕೊಟ್ಟ ಇನ್ಸ್‌ಪೆಕ್ಟರ್.!
ಈದ್ ಮಿಲಾದ್ ಶಾಂತಿ ಸಭೆ - ಖಡಕ್ ವಾರ್ನಿಂಗ್ ರವಾನಿಸಿದ ಇನ್ಸ್‌ಪೆಕ್ಟರ್ ಅನಂತಪದ್ಮನಾಭ

ಬಂಟ್ವಾಳ: ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು, ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿರುವ ವಿಚಾರ ಗಮನಕ್ಕೆ ಬಂದರೆ ನಾನು ಸುಮ್ಮನಿರಲ್ಲ , ಯಾವುದೇ ಕಾರ್ಯಕ್ರಮಗಳು ಕಾನೂನುಬದ್ದವಾಗಿ ಶಾಂತಿಯುತವಾಗಿ ನಡೆಯಬೇಕು,ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎಂದು ಬಂಟ್ವಾಳ ‌ನಗರ ಪೋಲೀಸ್ ಠಾಣೆಯ ನೂತನ ಇನ್ಸ್ ಪೆಕ್ಟರ್ ಅನಂತಪದ್ಮನಾಭ ಖಡಕ್ ಆಗಿ ಸೂಚನೆ ನೀಡಿದ್ದಾರೆ.

ಸೆ.28 ರಂದು ನಡೆಯುವ ಈದ್ ಮಿಲಾದ್ ಕಾರ್ಯಕ್ರಮ ಅಂಗವಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಾಮೂಹಿಕವಾಗಿ ,ಸಾಮಾಜಿಕವಾಗಿ ತಾಲೂಕಿನ ಎಲ್ಲಾ ಸಾರ್ವಜನಿಕರು ಜವಬ್ದಾರರು. ಕಾರ್ಯಕ್ರಮಗಳು ನಡೆಯುವಾಗ ಟ್ರಾಫಿಕ್ ಗೆ ಸಮಸ್ಯೆಗಳು ಆಗದಂತೆ ಕಾರ್ಯಕ್ರಮ ಸಂಯೋಜಕರು ಜಾಗೃತವಹಿಸಬೇಕು.

ಸಣ್ಣ ಪುಟ್ಟ ವಿಚಾರಗಳಿಗೆ ಸಮಸ್ಯೆಗಳು ಉಂಟಾಗಬಹುದು ಎಂಬುದು ಗಮನಕ್ಕೆ ಬಂದರೆ ನೇರವಾಗಿ ಪೋಲಿಸರಿಗೆ ಮಾಹಿತಿ ನೀಡಿ.ಯಾವುದೇ ಗೊಂದಲಕ್ಕೆ ಅವಕಾಶ ನೀಡಬೇಡಿ.ಕಾನೂನನ್ನು ಕೈಗೆತ್ತಿಕೊಂಡು ಅನಾಹುತಕ್ಕೆ ಕಾರಣವಾಗಬೇಡಿ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು. ವೈಯಕ್ತಿಕವಾಗಿ ಅಥವಾ ಸಾಮಾಜಿಕ ಸಮಸ್ಯೆಗಳಿದ್ದರೆ, ಮುಕ್ತವಾಗಿ ನನ್ನ ಬಳಿ ತಿಳಿಸಿ,ಅಂತಹ ಯಾವುದೇ ಸಮಸ್ಯೆಗಳಿದ್ದರು ಪರಿಹಾರವನ್ನು ಮಾಡುವಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ಟ್ರಾಫಿಕ್ ಸಮಸ್ಯೆಗಳಿಗೆ ಪೋಲೀಸ್ ಕಡೆಯಿಂದ ಯಾವ ಕ್ರಮಗಳು ಆಗಬೇಕು ಅದನ್ನು ಇಲಾಖೆ ಖಂಡಿತ ಮಾಡುತ್ತೇನೆ ಎಂದು ತಿಳಿಸಿದರು. ನಗರ ಠಾಣಾ ಎಸ್.ಐ.ರಾಮಕೃಷ್ಣ, ಅಪರಾಧ ವಿಭಾಗದ ಎಸ್.ಐ.ಕಲೈಮಾರ್, ಟ್ರಾಫಿಕ್ ಎಸ್.ಐ.ಸುತೇಶ್ ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!