"KSRTC ಬ್ರ್ಯಾಂಡ್ ಕರ್ನಾಟಕಕ್ಕೆ ಸೇರಿದ್ದು" – ಕೇರಳಕ್ಕೆ ಮುಖಭಂಗ.!
ಕೆ.ಎಸ್.ಆರ್.ಟಿ.ಸಿ ಟ್ರೇಡ್ ಮಾರ್ಕ್ ಕರ್ನಾಟಕದ ಪಾಲು : ಹೈಕೋರ್ಟ್ ಆದೇಶ

ಕೆಎಸ್ಆರ್ ಟಿಸಿ ಎಂಬ ಹೆಸರಿನ ಕುರಿತಂತೆ ಕೋರ್ಟ್ ನಲ್ಲಿ ವಾದ ಮಂಡಿಸುತ್ತಿದ್ದ ಕೇರಳ ಸರಕಾರಕ್ಕೆ ಮುಖಭಂಗವಾಗಿದ್ದು, ಕೆಎಸ್ಆರ್ ಟಿಸಿ ಬಳಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ್ದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ‘ಕೆಎಸ್‌ಆರ್‌ಟಿಸಿ’ ಎಂದು ಬಳಸಬಾರದು ಎಂದು ಕೇರಳ ರಾಜ್ಯ ಆರ್‌ಟಿಸಿ ಸಲ್ಲಿಸಿದ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ.

ತಿರುವಂಕೂರು ರಾಜ್ಯ ಸಾರಿಗೆ 1937ರಿಂದಲೇ ಇತ್ತು. ಕೇರಳ ರಾಜ್ಯ ಉದಯವಾದ ಮೇಲೆ 1965ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭವಾಯಿತು. ಕೆಎಸ್‌ಆರ್‌ಟಿಸಿ ಲೋಗೊ ಮಾಡಲಾಗಿದೆ. ಕರ್ನಾಟಕ ರಾಜ್ಯವೂ ಕೆಎಸ್‌ಆರ್‌ಟಿಸಿ ಎಂದೇ ಬಳಸುತ್ತಿದೆ ಎಂದು ಕೇರಳವು ವಿವರಣೆ ನೀಡಿತ್ತು.

ಕರ್ನಾಟಕದ ಲೋಗೊದಲ್ಲಿ ಗಂಡಭೇರುಂಡ ಗುರುತು ಬಳಕೆಗೆ ಕಾಪಿರೈಟ್‌ ಪಡೆಯಲಾಗಿದೆ. ಕೇರಳದ ಲೋಗೊದಲ್ಲಿ ‘ಆನೆಗಳು’ ಗುರುತು ಆಗಿದ್ದು, ಪ್ರತ್ಯೇಕ ಟ್ರೇಡ್‌ ಮಾರ್ಕ್‌ ಆಗಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು. ಕೇರಳದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕರ್ನಾಟಕದ ವಾದವನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!