"ಬಜರಂಗದಳ ಸೇವಾ ಬ್ರಿಗೇಡ್ ಎಡಪದವು" ಇದರ 62ನೇ ಸೇವಾ ಮಾಸಿಕ ಯೋಜನೆಯ ಹಸ್ತಾಂತರ
27ತುರ್ತು ಯೋಜನೆ ಮೂಲಕ 136ಕುಟುಂಬಗಳಿಗೆ ನೆರವಾಗಿರುವ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು

ಮಂಗಳೂರು : ಸೇವೆಯ ಪರಮೋ ಧರ್ಮಃ ಎಂಬ ಗುರಿಯನ್ನು ಇಟ್ಟುಕೊಂಡು ಸ್ಥಾಪನೆಯಾದ "ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಮಂಗಳೂರು" ಸೇವಾ ಸಂಸ್ಥೆಯು ತನ್ನ ಮಾಸಿಕ ಹಾಗೂ ತುರ್ತು ಸೇವಾ ಕಾರ್ಯ ಧಾರ್ಮಿಕ ಶೈಕ್ಷಣಿಕ ವಿವಿಧ ಹಲವಾರು ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡು, ಬದ ಕುಟುಂಬಗಳಿಗೆ ನೆರವಾಗಿ ಪ್ರಚಾರದ ಹಂಗಿಲ್ಲದೆ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿದೆ.

ತನ್ನ ಸೇವಾ ಪಯಣದಲ್ಲಿ 62 ಮಾಸಿಕ ಸೇವಾ ಯೋಜನೆಯ ಮೂಲಕ 27 ತುರ್ತು ಯೋಜನೆಯೊಂದಿಗೆ 136 ಕುಟುಂಬಗಳಿಗೆ 40,15,000ರೂ ಸಹಾಯಧನ ಮಾಡಿದೆ.

ಗೋಕಾಣಿಕೆ ಹಾಗೂ ಹಿಂಡಿ ಸಮರ್ಪಣೆ

ಗೋವಂಶದ ಉಳಿವಿಗಾಗಿ 2000ನೇ ಇಸವಿಯಿಂದ ನಿರಂತರ ಸೇವೆಗೈಯುತ್ತಿರುವ ಗೋವನಿತಾಶ್ರಯ ಟ್ರಸ್ಟ್. ಗೋಶಾಲೆಯಲ್ಲಿ 400 ದನಕರುಗಳನ್ನು ಸಾಕಲಾಗುತ್ತಿದ್ದು, ಇದಕ್ಕೆ ಪ್ರತೀ ತಿಂಗಳು 10 ಲಕ್ಷದವರೆಗೆ ಖರ್ಚುಗಳನ್ನು ಹೊಂದಿಸಬೇಕಾಗಿದೆ. ಹಾಗಾಗಿ ಗೋವು ಸಂರಕ್ಷಣೆ ಅಭಿಯಾನದಲ್ಲಿ ಎಡಪದವು ಘಟಕದ ವತಿಯಿಂದ ಪಜೀರು ಗೋಶಾಲೆಗೆ ಗೋಕಾಣಿಕೆ ಸೇವಾ ಸಮರ್ಪಣೆ ನೀಡಲು ನಿರ್ಧರಿಸಿ ಗೋವು ಪ್ರೇಮಿಗಳಿಂದ ಸಂಗ್ರಹವಾದ ₹ 50,000 ರೂಪಾಯಿ ಸೇವಾಮೊತ್ತ ಹಾಗೂ 5 ಗೋಣಿ ಹಿಂಡಿ ಸೇವಾ ರೂಪದಲ್ಲಿ ನೀಡಿದ್ದಾರೆ.

62 ನೇ ಸೇವಾ ಮಾಸಿಕ ಯೋಜನೆಯ ಹಸ್ತಾಂತರ ಹಾಗೂ ಫಲಾನುಭವಿ ಕುಟುಂಬದ ವಿವರ :

ಕುಟುಂಬ 1 - ಮಾಧವಿ ಕಡೇಶಿವಾಲಯ

ಕಡೇಶಿವಾಲಯ ನಿವಾಸಿಯಾದ ಮಾಧವಿ ಇವರ ಮನೆ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ವತಿಯಿಂದ ₹50,000 ರೂಪಾಯಿಗಳು ಸೇವಾ ರೂಪದಲ್ಲಿ ಧನಸಹಾಯ ಮಾಡಿದೆ.

ಕುಟುಂಬ 2 - ಸುಂದರ್ ಪೂಜಾರಿ

ಸಿದ್ಧಕಟ್ಟೆ ಸಮೀಪದ ಕುದ್ಕೋಳಿ ನಿವಾಸಿ ಸುಂದರ್ ಪೂಜಾರಿ ಇವರು ಇತ್ತೀಚಿಗೆ ಮೆಸ್ಕಾಂ ಕೆಲಸ ಮಾಡುತಿರುವಾಗ ಕಂಬದಿಂದ ಬಿದ್ದು ಕೈ ಗೆ ಏಟು ಬಿದ್ದು ಶಸ್ತ್ರಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿ ಆರ್ಥಿಕವಾಗಿ ಸಂಕಷ್ಟದ್ದರು. ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ವತಿಯಿಂದ ತುರ್ತು ಯೋಜನೆಯ ಮೂಲಕ 10,000 ರೂಪಾಯಿಗಳನ್ನು ನೀಡಿದ್ದಾರೆ.

ಡಿಸೆಂಬರ್ ತಿಂಗಳ 62 ಸೇವಾ ಮಾಸಿಕ ಯೋಜನೆ ಯಶಸ್ವಿಯಾಗಿದ್ದು, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಧನ್ಯವಾದಗಳನ್ನು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!