ಏ. 22 ರಿಂದ ಏ. 27ರವರೆಗೆ ಈಶ್ವರಗೋಳಿ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ನೇಮೋತ್ಸವ
ಏ. 22 ರಿಂದ ಏ. 27ರವರೆಗೆ ಈಶ್ವರಗೋಳಿ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ನೇಮೋತ್ಸವ

ಶ್ರೀ ಬ್ರಹ್ಮಮುಗೇರ ಶ್ರೀ ಮಹಾಂಕಾಳಿ ದೈವಸ್ಥಾನ (ರಿ) ಕುಳಾಯಿ - ಹೊಸಬೆಟ್ಟು "ಈಶ್ವರಗೋಳಿ" ಇದರ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ನೇಮೋತ್ಸವ 

ಶ್ರೀ ಬ್ರಹ್ಮ ಮುಗೇರ ಶ್ರೀ ಮಹಾಂಕಾಳಿ ದೈವಸ್ಥಾನ ಕುಳಾಯಿ ಹೊಸಬೆಟ್ಟು "ಈಶ್ವರಗೋಳಿ" ಇದರ ನೂತನ ಶಿಲಾಮಯ ದೈವಸ್ಥಾನದ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ನೇಮೋತ್ಸವ ಏಪ್ರಿಲ್ 22 ರಿಂದ 27 ವರೆಗೆ ನಡೆಯಲಿದೆ.  

ಏ.24 ರಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ, ಶ್ರೀ ಧಾಮ ಮಾಣಿಲ ಇವರ ನೇತೃತ್ವದಲ್ಲಿ ಶ್ರೀ ಬ್ರಹ್ಮರು, ಧರ್ಮರಸು ಉಳ್ಳಾಲ, ಶ್ರೀ ಮಹಾಂಕಾಳಿ, ಶ್ರೀ ಬ್ರಹ್ಮಮುಗೇರ ಮತ್ತು ಶಕ್ತಿ ಸ್ವರೂಪಿನಿ ತಂಗಡಿ, ಶ್ರೀ ಅಲೇರ ಪಂಜಿರ್ಲಿ ಹಾಗೂ ದೈವರಾಜ ಮಂತ್ರ ಗುಳಿಗ ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ಸ್ವಾಮಿ ಕೊರಗಜ್ಜನಿಗೆ ಶುದ್ಧ ಮುದ್ರಿಕೆ ಧಾರ್ಮಿಕ ವಿಧಿಗನ್ನು ವೇದಮೂರ್ತಿ ಶ್ರೀ ಎಚ್ ರಂಗನಾಥ್ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ. 

ಆ ಪ್ರಯುಕ್ತವಾಗಿ ಏ.22 ರಿಂದ 27 ರವರೆಗೆ ಕ್ಷೇತ್ರದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಏ. 24 ರಂದು ಮಧ್ಯಾಹ್ಮ 3:30ಕ್ಕೆ ಭಂಡಾರ ಏರಲಿದೆ. ರಾತ್ರಿ ಧರ್ಮರಸು ಶ್ರೀ ಉಳ್ಳಾಲ ದೈವದ ನೇಮೋತ್ಸವ, ರಾತ್ರಿ 9:30 ಕ್ಕೆ ಶ್ರೀ ಬ್ರಹ್ಮ ಮುಗೇರ ಮತ್ತು ಶಕ್ತಿ ಸ್ವರೂಪಿಣಿ ತಂಗಡಿ ದೈವದ ನೇಮೋತ್ಸವ ನಡೆಯಲಿದೆ.

ಏ.26 ರಂದು ರಾತ್ರಿ 8 ರಿಂದ ಅನ್ನಸಂತರ್ಪಣೆ ನಡೆದು ರಾತ್ರಿ 9:30 ರಿಂದ ಶ್ರೀ ಮಹಾಂಕಾಳಿ ಅಮ್ಮನವರ ನೇಮೋತ್ಸವ ನಡೆಯಲಿದೆ.

ಏ. 26 ರಂದು ಬೆಳಗ್ಗೆ 11:30 ದೈವರಾಜ ಮಂತ್ರಗುಳಿಗ ದೈವದ ನೇಮೋತ್ಸವ ಮಧ್ಯಾಹ್ನ 12 ರಿಂದ ಅನ್ನಸಂತರ್ಪಣೆ ನಂತರ ವರಹಮೂರ್ತಿ ಶ್ರೀ ಅಲೆರಾ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. 

ಏ.27 ರಂದು ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆದು ರಾತ್ರಿ 9 ಗಂಟೆಗೆ ಶ್ರೀ ಸ್ವಾಮಿ ಕೊರಗಜ್ಜ ದೈವದ ಕೋಲ ನಡೆಯಲಿದೆ.

ಮೇ 4 ರ ಶನಿವಾರ ಶ್ರೀಮತಿ ಮತ್ತು ಶ್ರೀ ರಾಮ ದೇವಾಡಿಗ ಮತ್ತು ಮಕ್ಕಳು ಮುಂಬೈ ಇವರ ಹರಕೆಯ ಸ್ವಾಮಿ ಕೊರಗಜ್ಜ ದೈವದ ಕೋಲ ನಡೆದು ಅನ್ನಸಂತರ್ಪಣೆ ನಡೆಯಲಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!