ಕಾರ್ಕಳ: ಅಭಿನವ್ ಭಾರತ್ "ನಮಗಾಗಿ ಮೋದಿ" ಬೃಹತ್ ಕಾಲ್ನಡಿಗೆ ಜಾಥಾ
ಕಾರ್ಕಳದಲ್ಲಿ ಸಿಡಿಲ ಸಂಚಲನ ಸೃಷ್ಟಿಸಿದ ಅಭಿನವ್ ಭಾರತ್ ಕಾರ್ಕಳದ "ನಮಗಾಗಿ ಮೋದಿ" ಕಾರ್ಯಕ್ರಮ

ಕಾರ್ಕಳ : ಕಾರ್ಕಳದಲ್ಲಿ ಸಿಡಿಲ ಸಂಚಲನ ಸೃಷ್ಟಿಸಿದ ಅಭಿನವ್ ಭಾರತ್ ಕಾರ್ಕಳದ "ನಮಗಾಗಿ ಮೋದಿ" ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.

ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಕೇರಳದ ಅಪ್ಪಟ ಸನಾತನಿ ಹಿಂದೂ ಸಂತ ಭದ್ರಾನಂದ ಸ್ವಾಮಿಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಈ ಬೃಹತ್ ಕಾಲ್ನಡಿಗೆ ಜಾಥಾ ನಡೆದಿದೆ.

ಅಭಿನವ್ ಭಾರತ್ ಕಾರ್ಕಳದ ಕರೆಗೆ ಓಗೊಟ್ಟು ಧಾವಿಸಿ ಬಂದ ಸಹಸ್ರಾರು ರಾಷ್ಟ್ರ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮೋದಿಯವರ ಮುಖವಾಡ ಧರಿಸಿದ 500 ದೇಶಭಕ್ತರಿಂದ ಕಾರ್ಕಳದ ರಥಬೀದಿಯಲ್ಲಿ  ಅಬ್ ಕಿ ಬಾರ್ ಚಾರ್ ಸೌ ಪಾರ್ ( ಈ ಬಾರಿ 400 ರ ಮೇಲೆ ಸೀಟು) ಎಂಬ ಜಯಘೋಷಣೆಯೊಂದಿಗೆ ಕಾರ್ಕಳದ ಶ್ರೀ ಅನಂತ ಪದ್ಮನಾಭ ದೇಗುಲದಿಂದ ಪ್ರಾರಂಭವಾಗಿ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ಕಾಲ್ನಡಿಗೆ ಜಾಥಾ ಮೂಲಕ ಸಾಗಿ ಬಂದ ಸಾವಿರಾರು ರಾಷ್ಟ್ರ ಭಕ್ತರಿಂದ ನರೇಂದ್ರ ಮೋದಿಜಿಯನ್ನು ಮೂರನೇ ಅವಧಿಗೆ ಪ್ರಧಾನಿ ಮಾಡುವ ಸಂಕಲ್ಪ ಸ್ವೀಕಾರವಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!