ರಶ್ಮಿ. ಜೆ .ಅಂಚನ್ ಗೆ ರಾಷ್ಟ್ರಮಟ್ಟದ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿ
ಕಠಿಣ ಪರಿಶ್ರಮ ಸಾಧನೆಗೆ ಮೂಲ

ರಶ್ಮಿ. ಜೆ .ಅಂಚನ್ ಗೆ ರಾಷ್ಟ್ರಮಟ್ಟದ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿ

 

ಸುರತ್ಕಲ್: ರಾಷ್ಟ್ರೀಯ ಸೇವಾ ಯೋಜನೆ 2020 -2021ನೇ ಸಾಲಿನ  ರಾಷ್ಟ್ರಮಟ್ಟದ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿಗೆ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ ರಶ್ಮಿ ಜೆ.ಅಂಚನ್ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಇವರು ರಾಜ್ಯಮಟ್ಟದ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿ ಪಡೆದಿದ್ದರು.

ಕಠಿಣ ಪರಿಶ್ರಮ ಸಾಧನೆಗೆ ಮೂಲ

   ಎನ್ನೆಸ್ಸೆಸ್ ಸ್ವಯಂಸೇವಕಿಯಾಗಿ ಕೆಲಸ ಮಾಡುವಲ್ಲಿ ಪಟ್ಟ ಶ್ರಮ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಬೇಕೆಂಬ ತುಡಿತ ಹಾಗೂ ಇವೆಲ್ಲವನ್ನೂ ಸೇರಿಸಿ ಮಾಡಿದ ಕಠಿಣ ಪರಿಶ್ರಮದಿಂದ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದೆ. ಈಗ ರಾಷ್ಟ್ರಮಟ್ಟದ ಪುರಸ್ಕಾರಕ್ಕೂ ಆಯ್ಕೆಯಾಗಿದ್ದೇನೆ. ಇದು ನನಗೆ ಅತ್ಯಂತ ಖುಷಿಯ ವಿಷಯ...

 ಹೀಗೆ ರಾಷ್ಟ್ರಮಟ್ಟದ ಎನ್ನೆಸ್ಸೆಸ್ ಉತ್ತಮ ಸ್ವಯಂಸೇವಕಿ ಪ್ರಶಸ್ತಿಗೆ ಆಯ್ಕೆಯಾದ ಸುರತ್ಕಲ್‌ನ ಗೋವಿಂದದಾಸ ಕಾಲೇಜು ವಿದ್ಯಾರ್ಥಿನಿ ರಶ್ಮಿ ಜೆ.ಅಂಚನ್ ಮನದಾಳದ ಮಾತು ಹೊರಹಾಕಿದರು.

 ರಾಜ್ಯಪ್ರಶಸ್ತಿ ಸ್ವೀಕರಿಸಿ ಆಗಮಿಸಿದ ಬಳಿಕ ತಮ್ಮ ಸಾಧನೆಯ ಮೆಲುಕು ಹಾಕಿದ ಅವರು, ಅತ್ಯುತ್ತಮ ಸ್ವಯಂಸೇವಕಿ ಪುರಸ್ಕಾರ ಪಡೆದಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ. ಇದೇ ಖುಷಿಯಲ್ಲಿ ನನಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಕೂಡ ಇದೇ ತಿಂಗಳು 24 ನೇ ತಾರೀಕಿಗೆ ಪ್ರಧಾನವಾಗಲಿದೆ ಈ ಪ್ರಶಸ್ತಿ ಸ್ವೀಕರಿಸುವಾಗ ಧನ್ಯತಾ ಭಾವ ಮೂಡಿತು. ಎನ್ನೆಸ್ಸೆಸ್ ಕಾರ್ಯಚಟುವಟಿಕೆಗಳ ವೇಳೆ ನಾನು ನಿರ್ವಹಿಸಿದ ಕೆಲಸದ ಬಗ್ಗೆ ತೃಪ್ತ ಭಾವ ಇದೆ ಎಂದು ಹೇಳಿದರು.

 ಎನ್ನೆಸ್ಸೆಸ್ ಕಾರ್ಯಚಟುವಟಿಕೆಗಳಲ್ಲದೆ ಕಾಲೇಜಿನಲ್ಲಿ ನಡೆಯುವ ಎಲ್ಲ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಅಂತರಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದೆ. ರಾಷ್ಟ್ರಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಜಯಿಸಿದ್ದೂ ನನಗೆ ಉತ್ತಮ ಸ್ವಯಂಸೇವಕಿ ಪ್ರಶಸ್ತಿ ಪಡೆಯಲು ಕಾರಣವಾಯಿತು. ಚಿಕ್ಕಂದಿನಲ್ಲೇ ಭರತನಾಟ್ಯ ಕಲಿತಿದ್ದು ಈಗಲೂ ಅದರಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದರು.

 

 ಕ್ವೋಟ್

 ರಾಜ್ಯಮಟ್ಟದ ಪುರಸ್ಕಾರಕ್ಕೆ ಆಯ್ಕೆ ಮಾಡುವಾಗ ಅವರು ಎಷ್ಟು ರಾಷ್ಟ್ರೀಯ ಕ್ಯಾಂಪ್, ರಾಜ್ಯಮಟ್ಟದ ಕ್ಯಾಂಪ್‌ನಲ್ಲಿ ಭಾಗವಹಿಸುತ್ತಾರೆ ಎಂಬುದು ಗಣನೆಗೆ ಬರುತ್ತದೆ. ಜತೆಗೆ ಅವರ ಇತರ ಪಠ್ಯೇತರ ಚಟುವಟಿಕೆಗಳೂ ಪರಿಗಣಿಸಲ್ಪಡುತ್ತದೆ. ರಶ್ಮಿ ಅಂಚನ್ ಎನ್ನೆಸ್ಸೆಸ್ ಚಟುವಟಿಕೆಯ ಜತೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದು ಅದರ ಮಾನದಂಡವೂ ಪುರಸ್ಕಾರಕ್ಕೆ ಗಣನೆಗೆ ಬಂದಿದೆ.

 ಪ್ರತೀಕ್ಷಾ

 ಉಪನ್ಯಾಸಕಿ ಗೋವಿಂದದಾಸ ಕಾಲೇಜು ಸುರತ್ಕಲ್


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!