ಎರಡು ಬಡ ಕುಟುಂಬದ ಕಷ್ಟಕ್ಕೆ ಮಿಡಿದ ಮಂಜಣ್ಣ ಬ್ರಿಗೇಡ್...!
ಎರಡು ಬಡ ಕುಟುಂಬದ ಕಷ್ಟಕ್ಕೆ ಮಿಡಿದ ಮಂಜಣ್ಣ ಬ್ರಿಗೇಡ್...!

ಸುರತ್ಕಲ್: ಹಿಂದು ಸಮಾಜ ಮತ್ತು ಹಿಂದುತ್ವಕ್ಕಾಗಿ ಜೀವನವನ್ನೇ ಧಾರೆ ಎರೆದಿದ್ದ ಮಂಜುನಾಥ್ ಯಾನೆ ಮಂಜಣ್ಣ ಅವರ ನೆನಪಿನಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಮಂಜಣ್ಣ ಸೇವಾ ಬ್ರಿಗೇಡ್ ಗುರುವಾರ ಎರಡು ಬಡ ಕುಟುಂಬಗಳ ಕಷ್ಟಕ್ಕೆ ಮಿಡಿದಿದೆ.

ಇದುವರೆಗೆ ಹಲವಾರು ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಹಲವು ಕುಟುಂಬಗಳಿಗೆ ನೆರವು ನೀಡಿರುವ ಮಂಜಣ್ಣ ಬ್ರಿಗೇಡ್ ಗುರುವಾರ ಸಂಜೆ ಕುಪ್ಪೆಪದವು ಎಂಬಲ್ಲಿ, ವಿಜಯವಾಣಿ ಪತ್ರಿಕೆಯ ಮೋಹನ್ ಮರಕಡ ಅವರ ಕೋರಿಕೆಯ ಮೇರೆಗೆ ಎರಡೂ ದೃಷ್ಟಿ ಕಳೆದುಕೊಂಡು ಕಷ್ಟದ ಜೀವನ ನಡಸುತ್ತಿರುವ ರಾಜೀವ ಕುಲಾಲ್ ಅವರ ಕುಟುಂಬಕ್ಕೆ 25,000 ರೂ. ನೆರವು ಹಸ್ತಾಂತರಿಸಿದರು.. 

ರಾಜೀವ ಕುಲಾಲ್ ಎಂಟು ವರ್ಷಗಳ ಹಿಂದೆ ಸೆಂಟ್ರಿಂಗ್ ಕೆಲಸ ಮಾಡುತ್ತಿರುವಾಗ ಅವರ ಕಣ್ಣಿಗೆ ಮೊಳೆ ಬಿದ್ದು ಎರಡೂ ದೃಷ್ಟಿ ಕಳೆದುಕೊಂಡಿದ್ದರು. ಅವರ ಪತ್ನಿ ಭಾರತಿ ಕುಪ್ಪೆಪದವಿನಲ್ಲಿ ಶಾಲೆಯೊಂದರ ಮೆಸ್‌ನಲ್ಲಿ ಕೆಲಸ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದಾರೆ... ಮಗಳು ದಿವ್ಯಶ್ರೀ ಮೂರನೇ ತರಗತಿ ಓದುತ್ತಿದ್ದು, ಸ್ಥಳೀಯ ದಾನಿಗಳು ಇವರ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ. ಇವರ ಕಷ್ಟ ಅರಿತು ಮಂಜಣ್ಣ ಬ್ರಿಗೇಡ್‌ನಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

ಹಾಗೂ ಇದೇ ದಿನ ಉರ್ವಸ್ಟೋರ್ ನಿವಾಸಿ ನಿಶಾನ್ ವಾಹನ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಇವರ ಚಿಕಿತ್ಸಾ ವೆಚ್ಚವಾಗಿ ಮಂಜಣ್ಣ ಸೇವಾ ಬ್ರಿಗೇಡ್‌ನಿಂದ 25,000 ರೂ. ಆರ್ಥಿಕ ನೆರವು ಗುರುವಾರ ಹಸ್ತಾಂತರಿಸಿದರು.

ಈ ಸಂಧರ್ಭ ಕುಪ್ಪೆಪದವಿನ ಹಿರಿಯರಾದ ಪ್ರಭಾಕರ್ ಶೆಟ್ಟಿ ಕಡಂಬಿಲ, ಮಂಜಣ್ಣ ಸೇವಾ ಬ್ರಿಗೇಡ್ ನ ಅಧ್ಯಕ್ಷರಾದ ವಸಂತ್ ಹೊಸಬೆಟ್ಟು, ಮಂಜಣ್ಣ ಸೇವಾ ಬ್ರಿಗೇಡ್ ನ ಕಾರ್ಯದರ್ಶಿಯಾದ ಪ್ರಮೋದ್ ಶೆಟ್ಟಿ ತೋಕೂರು, ಹಾಗೂ ಬ್ರಿಗೇಡ್ ನ  ಪ್ರಮುಖರುಗಳಾದ ತಿಲಕ್ ಶೆಟ್ಟಿ ಆಕಾಶಭವನ, ನಾಗೇಶ್ ಪೂಜಾರಿ ತೋಕೂರು, ದಯಾನಂದ್ ತೋಕೂರು, ರಮಾನಾಥ್ ಕೋಡಿಕೆರೆ ಸುನಿಲ್ ತೋಕೂರು, ನಾಗೇಶ್ ಶೆಟ್ಟಿ ತೋಕೂರು ಮತ್ತು ಬ್ರಿಗೇಡ್ ನ ಎಲ್ಲಾ ಕಾರ್ಯಕರ್ತರು ಉಪಸ್ಥಿತಿಯಿದ್ದರು...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!