ಧರಣಿ ನಡೆಸಲು ತೀರ್ಮಾನಿಸಿದ್ದ ಸ್ಥಳದ ಸುತ್ತಮುತ್ತ ಸೆಕ್ಷನ್ 144 ಜಾರಿ...
ಸುರತ್ಕಲ್

ಸುರತ್ಕಲ್ ಟೋಲ್ ಗೇಟ್ ತೆರವು ಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ಬಾರದೆ ಇರುವ ಹಿನ್ನಲೆಯಲ್ಲಿ, ಟೋಲ್ ವಿರೋಧಿ ಸಮಿತಿ  ಅಕ್ಟೋಬರ್ 28 ರಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಸುವ ಬಗ್ಗೆ ನಿರ್ಧರಿಸಿದ್ದು, ಈ ಬಗ್ಗೆ ಮುಂಜಾಗ್ರತ ಕ್ರಮವಾಗಿ ಟೋಲ್ ನ 200 ಮೀಟರ್ ಸುತ್ತಮುತ್ತ, ನಗರ ಪೊಲೀಸ್ ಕಮೀಷನರ್ ಆದ ಎನ್. ಶಶಿಕುಮಾರ್ 144 ಸೆಕ್ಟನ್ ಹೊರಡಿಸಿದ್ದಾರೆ..

ಹೋರಾಟ ಕೈ ಬಿಡುವಂತೆ ಗುರುವಾರ ಹೆದ್ದಾರಿ ಅಧಿಕಾರಿಗಳು, ಟೋಲ್ ವಿರೋಧಿ ಸಮಿತಿಯ ಪದಾಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ತುರ್ತು ಸಭೆ ನಡೆಸಿದಾಗ ಟೋಲ್ ತೆರವಿಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ... ಆದರೆ ಗಜೆಟ್ ನೋಟಿಫಿಕೇಶನ್ ಗೆ ಕಾಲಾವಕಾಶ ಬೇಕಾದ ಕಾರಣ ಉದ್ದೇಶಿಸಲಾಗಿದ್ದ ಧರಣಿ ಸತ್ಯಾಗ್ರಹವನ್ನು ಹತ್ತು ದಿನ ಮುಂದೂಡುವಂತೆ ಹೈವೇ ಅಧಿಕಾರಿಗಳು ಮನವಿ ಮಾಡಿದ್ದರು... ಅದರ ಮೇಲಾಗಿಯು ಈ ಮನವಿಯನ್ನು ತಿರಸ್ಕರಿಸಿ ನಾಳೆಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ಟೋಲ್ ವಿರೋಧಿ ಸಮಿತಿ ತೀರ್ಮಾನಿಸಿದೆ...

ಈ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮಾನ್ಯ ಕಮೀಷನರ್ ನಿಷೇದಾಜ್ಞೆ ಜಾರಿ ಮಾಡಿ, ಆದೇಶ ಹೊರಡಿಸಿದ್ದಾರೆ... 

ಶುಕ್ರವಾರ ಮುಂಜಾನೆ 6 ರಿಂದ ನವೆಂಬರ್ 3ರ ಸಂಜೆ 6 ರ ವರೆಗೆ ಟೋಲ್ ಗೇಟ್ ವ್ಯಾಪ್ತಿಯ 200 ಮೀಟರ್ ಸುತ್ತಮುತ್ತ 144ರ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಈ ಪ್ರದೇಶದಲ್ಲಿ ಸಭೆ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!