ಕೊರೊನಾ ಭಯ-3 ವರ್ಷದಿಂದ ಮಗನನ್ನು ಮನೆಯೊಳಗೆ ಲಾಕ್ ಮಾಡಿದ ಮಹಿಳೆ!
10ರ ಹರೆಯದ ಮಗ ಮನೆಯೊಳಗೆ ಲಾಕ್

ಕೊರೊನಾ ಸೋಂಕಿನ ಭೀತಿಯಿಂದ ಮಹಿಳೆಯೊಬ್ಬಳು ತನ್ನ 10 ವರ್ಷದ ಪುತ್ರನನ್ನು ಬರೋಬ್ಬರಿ ಮೂರು ವರ್ಷ ಕಾಲ ಮನೆಯೊಳಗೇ ಕೂಡಿ ಹಾಕಿದ ಘಟನೆ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗುರುಗ್ರಾಮ್​ನ ಮಾರುತಿ ಕುಂಜ್ ನಗರ ನಿವಾಸಿ ಮುನ್ಮುನ್ ಮಾಝಿ ಎಂಬಾಕೆಯೇ ತಾನೂ ಮನೆಯೊಳಗೆ ಬಂಧಿಯಾಗಿರುವುದಲ್ಲದೆ ಮಗನನ್ನೂ ಕೂಡಿ ಹಾಕಿರುವಾಕೆ. 2020ರಿಂದ ಇವರಿಬ್ಬರೂ ಮನೆಯೊಳಗೇ ಲಾಕ್ ಆಗಿದ್ದಾರೆ.

ಇನ್ನು ಈಕೆಯ ಪತಿ ಸುಜನ್ ಮಾಝಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಕೊರೊನಾ ಭಯದಿಂದ ಆತನನ್ನೂ ಆಕೆ ಮನೆಯೊಳಗೆ ಬಿಡುತ್ತಿರಲಿಲ್ಲ. ಮನೆಯ ಬಾಗಿಲು ತೆರೆಯುವಂತೆ ಪತಿ ಅನೇಕ ಬಾರಿ ಪತ್ನಿಯಲ್ಲಿ ಕೋರಿಕೊಂಡರೂ ಆಕೆ ಬಾಗಿಲು ತೆರೆಯುತ್ತಿರಲಿಲ್ಲ. ಮೂರು ವರ್ಷಗಳ ಬಳಿಕ ನಿನ್ನೆ ಆರೋಗ್ಯ, ಪೊಲೀಸ್ ಮತ್ತು ಮಕ್ಕಳ ಸೇವಾ ಇಲಾಖೆ ಅಧಿಕಾರಿಗಳ ತಂಡ ಆಕೆಯ ಮನೆಗೆ ತೆರಳಿ ಪುತ್ರನನ್ನು ಮನೆಯಿಂದ ಹೊರ ತಂದಿದ್ದಾರೆ.

ಇನ್ನು ಪತ್ನಿ ಕೊರೊನಾ ಭಯದಿಂದಾಗಿ ತನ್ನನ್ನು ಮನೆಯೊಳಗೆ ಸೇರಿಸದ ಕಾರಣಕ್ಕಾಗಿ ಪತಿ ಸುಜನ್ ಮಾಝಿ ಅವರು ಅದೇ ಪ್ರದೇಶದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಎಷ್ಟೇ ಮನವೊಲಿಕೆ ಮಾಡಿದರೂ ಪತ್ನಿ ಮಣಿಯದೇ ಇದ್ದುದರಿಂದ ವೀಡಿಯೋ ಕರೆಗಳ ಮೂಲಕವೇ ಮನೆಯವರೊಂದಿಗೆ ಸಂಪರ್ಕ ನಡೆಸಬೇಕಾದ ಅನಿವಾರ್ಯತೆ ಸುಜನ್ ಅವರದಾಗಿತ್ತು ಎಂದು ವರದಿಯಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!