ಎಕ್ಸಿಟ್ ಪೋಲ್ ಸಮೀಕ್ಷೆ: ಕಾಂಗ್ರೆಸ್‌‌ಗೆ ಬಹುಮತ, ಅತಂತ್ರ ವಿಧಾನಸಭೆ ಸುಳಿವು.!
ಯಾರ್ಯಾರ ಸಮೀಕ್ಷೆ ಹೇಗಿದೆ.?

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡಿದ್ದು, ಮತದಾರರ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಈ ನಡುವೆ ಇದೀಗ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಗಲಿದೆ ಎಂದು ಹಲವು ಸಮೀಕ್ಷೆಗಳಲ್ಲಿ ಉಲ್ಲೇಖವಾಗಿದೆ.

ಸದ್ಯ ಹೊರ ಬಿದ್ದಿರುವ ಎಕ್ಸಿಟ್ ಪೋಲ್ ಗಳ ಪ್ರಕಾರ ನಾಲ್ಕು ಸಂಸ್ಥೆಗಳ ಸಮೀಕ್ಷೆ ಕಾಂಗ್ರೆಸ್ ಗೆ ಬಹುಮತ ಎಂದಿದೆ.

ಇಂಡಿಯಾ ಟಿವಿ: ಕಾಂಗ್ರೆಸ್- 106-120 ಬಿಜೆಪಿ 80-90

ಟೈಮ್ಸ್ ಇಟಿಜಿ: ಕಾಂಗ್ರೆಸ್- 106-120 ಬಿಜೆಪಿ 78-92

ಇಂಡಿಯ ಟುಡೆ: ಕಾಂಗ್ರೆಸ್- 122-140 ಬಿಜೆಪಿ 62-80

ಟುಡೇಸ್ ಚಾಣಕ್ಯ: ಕಾಂಗ್ರೆಸ್ 120 ಬಿಜೆಪಿ 92 ಸ್ಥಾನಗಳನ್ನು ಪಡೆಯಲಿದೆ ಎಂದು ಉಲ್ಲೇಖಿಸಿದೆ.

ಇನ್ನು ರಾಜ್ಯ ವಿಧಾನಸಭೆಯಲ್ಲಿ 224 ಸದಸ್ಯ ಬಲ ಇದ್ದು, 113 ಮ್ಯಾಜಿಕ್ ನಂಬರ್ ಆಗಿದೆ. 4 ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಬಹುಮಾನ ಎಂದಿದ್ದು, ಉಳಿದ ಮೂರು ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎನ್ನಲಾಗಿದೆ. ಆದರೆ, ಅಂತಿಮ ತೀರ್ಪು ಸಿಗೋದು ಮೇ 13ರಂದು.

ಸಿವೋಟರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 100 ರಿಂದ 112 ಸ್ಥಾನ ದೊರೆಯುವ ನಿರೀಕ್ಷೆ ಇದ್ದು, ಬಿಜೆಪಿಗೆ 83 ರಿಂದ 95 ಹಾಗೂ ಜೆಡಿಎಸ್ಗೆ 21 ರಿಂದ 29 ಸ್ಥಾನಗಳು ದೊರೆಯುವ ಸಾಧ್ಯತೆ ಇದೆ. ಇತರರು 2 ರಿಂದ 6 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಾಂಗ್ರೆಸ್ ಪಕ್ಷವು ಶೇ 41.1 ರಷ್ಟು ಮತ ಹಂಚಿಕೆ ಪಡೆದಿದೆ

ಜೀ ನ್ಯೂಸ್-ಮ್ಯಾಟ್ರಿಜ್ ಮತದಾನೋತ್ತರ ಸಮೀಕ್ಷೆ ಪ್ರಕಾರಬಿಜೆಪಿ-79-89, ಕಾಂಗ್ರೆಸ್: 108-118, ಜೆಡಿಎಸ್: 25-35, ಇತರೆ: 2-4 ಸ್ಥಾನ ಪಡೆಯಲಿದೆ.

ನ್ಯೂಸ್ ಆಫ್‌ ನೇಷನ್‌ ಸಮೀಕ್ಷೆ: ಬಿಜೆಪಿಗೆ ಸರಳ ಬಹುಮತ ಸಾಧ್ಯತೆ. ಸಮೀಕ್ಷೆಯಂತೆ, ಬಿಜೆಪಿಗೆ 114, ಕಾಂಗ್ರೆಸ್‌ಗೆ 86 ಸ್ಥಾನ ್ ಜೆಡಿಎಸ್ಗೆ 21 ಸ್ಥಾನ, ಇತರ 3 ಸ್ಥಾನ ಸಿಗುವ ಸಾಧ್ಯತೆ ಇದೆ.

ಸುವರ್ಣ ನ್ಯೂಸ್: ಬಿಜೆಪಿ- 94-117,ಕಾಂಗ್ರೆಸ್- 91-106,ಜೆಡಿಎಸ್- 14-24, ಇತರೆ- 2-6


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!