ಮಂಗಳೂರಿನ ಸುರತ್ಕಲ್, ಸ್ಟೇಟ್ ಬ್ಯಾಂಕ್ ಮತ್ತು ತೊಕ್ಕೊಟ್ಟು ಬಳಿ ನಡೆಯುತ್ತಿರುವ ಮಟ್ಕಾ ದಂಧೆಯ ಅಸಲಿ ಕಹಾನಿ
ಇಲ್ಲಿದೆ ನೋಡಿ ಮಟ್ಕಾ ಕಲೆಕ್ಷನ್ ನಡೆಯುತ್ತಿರುವ ಸ್ಥಳಗಳ ಸಂಪೂರ್ಣ ಚಿತ್ರಣ...

ದಿನಗೂಲಿ ಮಾಡುವ ನೌಕರರಿಂದ ಹಿಡಿದು, ದಿನಕ್ಕೆ 200,300 ರೂಪಾಯಿ ದುಡಿಯುವ ಜನರು ಈ ಮಟ್ಕಾ ದಂಧೆಗೆ ಹಣ ಸುರಿಸಿ ಮನೆಯವರು ಬೀದಿಪಾಲಾಗುವ ಪರಿಸ್ಥಿತಿ ಮಂಗಳೂರಿನ ಜನತೆಗೆ ಎದುರಾಗಿದೆ...

ಹೌದು, ಇತ್ತೀಚೆಗೆ ನಮ್ಮ ಮಾಧ್ಯಮದಲ್ಲಿ ವರದಿ ಮಾಡಿದ್ದ ಮಟ್ಕಾ ದಂಧೆಯ ಇಂಚಿಂಚು ಚಿತ್ರಣ ಇಲ್ಲಿದೆ ನೋಡಿ...

ತೊಕ್ಕೊಟ್ಟು

ಸ್ಟೇಟ್ ಬ್ಯಾಂಕ್

ಸುರತ್ಕಲ್

ಮೊದಲನೆಯದಾಗಿ ಮಂಗಳೂರಿನ ಒಳತೊಕ್ಕೊಟ್ಟು ಸಮೀಪದ ರೈಲ್ವೇ ಟ್ರಾಕ್ ಬಳಿ ನಡೆಯುತ್ತಿರುವ ಮಟ್ಕಾ ದಂಧೆ... ಮೊದಲು ಈ ಭಾಗದಲ್ಲಿ ಚಿಕ್ಕ ಅಂಗಡಿ ಒಂದರಲ್ಲಿ ನಡೆಯುತ್ತಿತ್ತು, ಆದರೆ ಈಗ ಅಲ್ಲೇ ರೋಡ್ ನಲ್ಲಿ ನಿಂತುಕೊಂಡು ಮಟ್ಕಾ ಹಣ ಸಂಗ್ರಹಿಸುತ್ತಿದ್ದಾರೆ... ಇಲಾಖೆಯ ಕಣ್ಣಿಗೆ ಮಣ್ಣೆರಚಲು ಅಂಗಡಿ ಬಂದ್ ಮಾಡಿ ಕದ್ದುಮುಚ್ಚಿ ಈ ನಂಬರ್ ಕಲೆಕ್ಷನ್ ಮಾಡುತ್ತಿದ್ದಾರೆ... 

ಇನ್ನು ಮಂಗಳೂರಿನ ಸ್ಟೇಟ್ ಬ್ಯಾಂಕ್ ಪೆಟ್ರೋಲ್ ಪಂಪ್ ಸಮೀಪದ ಕಿಂಗ್ಸ್ ಬಾರ್ & ರೆಸ್ಟೋರೆಂಟ್ ಹಿಂಭಾಗದಲ್ಲಿ ಮಟ್ಕಾ ಕಲೆಕ್ಟನ್ ಎಗ್ಗಿಲ್ಲದೆ ಸಾಗುತ್ತಿದೆ... ಇಲ್ಲಿಯೂ ಕೂಡ ಎದುರುಗಡೆ ಗೇಟ್ ಗೆ ಬೀಗ ಹಾಕಿ, ಬಾರ್ ಹಿಂಬದಿಯಿಂದ ಒಂದು ಬಾಗಿಲನ ಮೂಲಕ ಹೋಗಲು ದಾರಿ ಮಾಡಿದ್ದಾರೆ... ಮಟ್ಕಾ ನಂಬರ್ ಗೆ ಹಣ ಕಟ್ಟುವವರು, ಈ ಬಾರ್ ನ ಒಳ ದಾರಿಯ ಮೂಲಕ ಬಂದು ಹಣ ಕಟ್ಟಬೇಕು... ಎದುರುಗಡೆ ಗೇಟ್ ನಲ್ಲಿ ಯಾರಾದರೂ ಇಲಾಖೆಯವರು ಬರುತ್ತಾರೋ ಎಂದು ಕಾಯಲು ಕೂಡ ಜನ ಇಟ್ಟಿದ್ದಾರೆ... ಇಲ್ಲಿ ಬರುವ ಬಹುತೇಕ ಜನರು ಬಡವರೇ, ಕೂಲಿ ಕಾರ್ಮಿಕರೇ ಹೌದು...

ಇನ್ನು ಸುರತ್ಕಲ್ ಕಡೆ ಕಣ್ಣು ಹಾಯಿಸಿದರೆ, ಸುರತ್ಕಲ್ ಸರ್ವೀಸ್ ಬಸ್ ಸ್ಟ್ಯಾಂಡ್ ಗೆ 30 ಮೀಟರ್ ಅಂತರದಲ್ಲಿ ಯಾವುದೇ ಕಾರ್ ಇಲ್ಲದೆ ನಂಬರ್ ಕಲೆಕ್ಷನ್ ನಡೆಯುತ್ತಿದೆ... ಸುರತ್ಕಲ್ ನ ಮಟ್ಕಾ ಕಲೆಕ್ಷನ್ ನಡೆಯುತ್ತಿರುವ ಜಾಗದಲ್ಲಿ ಈ ಹಿಂದೆ ಪಂಚಪುಷ್ಪ ವೈನ್ಸ್ ಆಗಿತ್ತು... ಆದರೆ, ಬಾರ್ ಮುಚ್ಚಿಕೊಂಡ ನಂತರ ರೆಕ್ರಿಯೇಷನ್ ಕ್ಲಬ್ ಎಂದು ಇಸ್ಪೀಟ್ ದಂಧೆ ನಡೆಯುತಿತ್ತು.. ಮಂಗಳೂರು ಪೊಲೀಸ್ ನ ದಕ್ಷ ನಿರ್ವಹಣೆಯಿಂದ ಕ್ಲಬ್ ಗಳು ಸದ್ಯಕ್ಕೆ ಬಂದ್ ಆಗಿದೆ.. ಆದರೆ ಈ ವೈನ್ ಶಾಪ್ ಇದ್ದ ಜಾಗದಲ್ಲಿ ಈಗ ಮಟ್ಕಾ ನಂಬರ್  ಕಲೆಕ್ಷನ್ ಸೆಂಟರ್ ಆಗಿ ಬದಲಾಗಿದೆ..

ಈ ಮೂರು ಸದ್ಯಕ್ಕೆ ಕಣ್ಣೆದುರಿಗೆ ಕಾಣಿಸುವ ಮಟ್ಕಾ ಕಲೆಕ್ಷನ್ ಸೆಂಟರ್ ಆಗಿದೆ, ಇದಲ್ಲದೆ ಇನ್ನೂ ಹಲವಾರು ಕಡೆ ಈ ರೀತಿ ಮಟ್ಕಾ ಕಲೆಕ್ಷನ್ ಜೋರಾಗಿ ನಡೆಯುತ್ತಿವೆ... ಮೊಬೈಲ್ ಮೂಲಕ ಕೊಡ ಕಲೆಕ್ಷನ್ ನಡೆಯುತ್ತದೆ...

ಮಾನ್ಯ ಪೊಲೀಸ್ ಇಲಾಖೆ ಇನ್ನಾದರೂ ಇಂತಹ ಅನೇಕ ಮಟ್ಕಾ ದಂಧೆಯ ಬಗ್ಗೆ ಕಣ್ಣು ಹಾಯಿಸಿ ಎಲ್ಲಾ ಈ ರೀತಿಯ ಮಟ್ಕಾ ಅಕ್ರಮಕ್ಕೆ ಕಡಿವಾಣ ಹಾಕಿ, ಅಕ್ರಮ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಡಜನರ ಬದುಕು ಬೀದಿಪಾಲಾಗದಂತೆ ಕಾಪಾಡಬೇಕಾಗಿದೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!