ಪೊಳಲಿ ಅಡ್ಡೂರು ಫಲ್ಗುಣಿ ನದಿ ತಟದಲ್ಲಿ ಹಾಡುಹಗಲಲ್ಲೇ ಅಕ್ರಮ ಮರಳುಗಾರಿಕೆ....!
ಇಲ್ಲಿದೆ ನೋಡಿ ಈ ಅಕ್ರಮದ ಕಂಪ್ಲೀಟ್ ರಿಪೋರ್ಟ್...

ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ ಪ್ರಶಾಂತ ವಾತಾವರಣ, ಮಂಗಳೂರು ನಗರದಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಊರಿನ ಹೆಸರೇ ಪೊಳಲಿ... 

ಆದರೆ ಈ ಪೊಳಲಿ ಸಮೀಪದ ಅಡ್ಡೂರು ಫಲ್ಗುಣಿ ನದಿಯಲ್ಲಿ ಈಗ ಮರಳುಗಾರಿಕೆ ಮಿತಿಮೀರಿಯೇ ಸಾಗುತ್ತಿದೆ... 

ಹೌದು... ಪೊಳಲಿ ಅಡ್ಡೂರು ಸಂಪರ್ಕಿಸುವ ಸೇತುವೆ ಮೇಲೆ ನಿಂತು ಒಂದು ಕ್ಷಣ ಫಲ್ಗುಣಿ ನದಿ ತಟಕ್ಕೆ ಕಣ್ಣು ಹಾಯಿಸಿದರೆ ಸಾಕು, 30 ರಿಂದ 40 ನಾಡದೋಣಿಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುವುದು ಕಂಡುಬರುತ್ತದೆ.. ಸೇತುವೆಯ ಎರಡೂ ಭಾಗದಲ್ಲಿ ಕೂಡ ಎಗ್ಗಿಲ್ಲದೆ ಮರಳುಗಾರಿಕೆ ಸಾಗುತ್ತಲೇ ಇದೆ... ರಾತ್ರಿಯಾಗುತ್ತಿದ್ದಂತೆ ನಾಡದೋಣಿಗಳು ನದಿಗಿಳಿದು ಹೊಯ್ಗೆ ತೆಗೆದು ಹಾಕಿ ಅದನ್ನು ಸಾಗಾಟ ನಡೆಸುವ ಕಾರ್ಯ ಮುಂಜನೆಯವರೆಗೂ ನಡೆಯುತ್ತದೆ... 

ಇದಲ್ಲದೆ, ಆಶ್ಚರ್ಯವೇನೆಂದರೆ ಹಾಡು ಹಗಲಲ್ಲೇ ಅಕ್ರಮ ಮರಳು ಸಾಗಿಸುತ್ತಿರುವ ದಂಧೆಕೋರರ ಕೈಚಳಕ... ಯಾವ ಇಲಾಖೆಯನ್ನು ಕ್ಯಾರೇ ಎನ್ನದೆ ಇಸ್ಟೊಂದು ಆರಾಮಾಗಿ ಅಕ್ರಮ ಮರಳುಗಾರಿಕೆಯನ್ನು ಮಾಡುತ್ತಿದ್ದರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೈ ಕಟ್ಟಿ ಕೂತಿರುವುದು ಯಕ್ಷಪ್ರಶ್ನೆಯಾಗಿದೆ...

ಇನ್ನಾದರೂ ಸಂಭಂದಪಟ್ಟ ಇಲಾಖೆ, ಇಂತಹ ಅಕ್ರಮ ತಡೆಗಟ್ಟಿ ವಿವಿಧ ಇಲಾಖೆಗೆ ವಂಚಿಸುತ್ತಿರುವವರ ಹೆಡೆಮುರಿಕಟ್ಟಬೇಕಾಗಿದೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!