ಅಕ್ರಮ ಮರಳು ಶೇಖರಣೆಗೆ ಗಣಿ ಇಲಾಖೆ ದಾಳಿ
ಪಡುಬಿದ್ರೆ-ಎರ್ಮಾಳು-ಬೆಳಪು ಪರಿಸರದಲ್ಲಿ ಕಾರ್ಯಾಚರಣೆ.

ಅಕ್ರಮವಾಗಿ ಖಾಸಗಿ ಜಾಗದಲ್ಲಿ ಬಾರೀ ಮರಳು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಗಣಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಮಾಡಿ ಆರೋಪಿಗೆ ನೋಟೀಸು ನೀಡಿದ್ದಾರೆ.

ಅಕ್ರಮ ಮರಳುದಂಧೆಯ ಆರೋಪಿ ಮೂಲತಃ ಹೊರ ಜಿಲ್ಲೆಯವನ್ನಾಗಿದ್ದು ಇದೀಗ ಎರ್ಮಾಳಿನಲ್ಲಿ ನೆಲೆಸಿರುವ ಗಿರೀಶ್ ಎರ್ಮಾಳು, ಈತ ಪಡುಬಿದ್ರಿಯ ಅಬ್ಬೇಡಿ ರಸ್ತೆಯ ನಾಗರಾಜ ನಗರ ಬಳಿ, ಎರ್ಮಾಳಿನ ಪೂಂದಾಡು ಮೈದಾನ ಸಮೀಪ ಹಾಗೂ ಬೆಳಪುವಿನ ಪಡುಬಿದ್ರಿ ರೈಲ್ವೆ ಸ್ಟೇಷನ್ ಬಳಿಯ ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ಸಮುದ್ರ ಭಾಗ ಮರಳನ್ನು ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ 75ಟನ್ ಮರಳನ್ನು ಮೂರು ಗ್ರಾಮಗಳಲ್ಲಿ ಪತ್ತೆ ಮಾಡಿದ್ದಾರೆ.

ಈತ ಈ ಹಿಂದೆಯೂ ಇಂಥಹ ಕೃತ್ಯಗಳಲ್ಲಿ ಬಾಗಿಯಾಗಿ ದಂಡ ಕಟ್ಟಿಸಿಕೊಂಡವನಾಗಿದ್ದಾನೆ. ಈ ಬಗ್ಗೆ ಮಾತನಾಡಿದ ಅಕ್ರಮ ಮರಳು ದಾಸ್ತಾನು ಪ್ರದೇಶಕ್ಕೆ ದಾಳಿ ನಡೆಸಿದ ಉಡುಪಿ ಗಣಿ ಇಲಾಖಾ ಭೂ ವಿಜ್ಞಾನಿ ಗೌತಂ ಶಾಸ್ತ್ರಿ, ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದ್ದು, ಮೂರು ಗ್ರಾಮಗಳಲ್ಲೂ ಅಕ್ರಮ ದಾಸ್ತಾನು ಮಾಡಲಾದ ಮರಳು ನಾನೇ ದಾಸ್ತಾನು ನಡೆಸಿರುವುದಾಗಿ ಆರೋಪಿ ಗಿರೀಶ್ ಎರ್ಮಾಳು ಒಪ್ಪಿಕೊಂಡಿದ್ದಾನೆ.ಇಷ್ಟರಲ್ಲೇ ಆತನಿಗೆ ಸುಮಾರು ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ನೋಟಿಸು ನೀಡಲಾಗಿದೆ. ನಿಗದಿತ ಸಮಯದಲ್ಲಿ ದಂಡ ಪಾವತಿಸದೇ ಇದ್ದಲ್ಲಿ ಆತನ ವಿರುದ್ಧ ಖಾಸಗಿ ದೂರು ನೀಡಲಾಗುವುದೆಂದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!