ಗಾಳಿ ಮಳೆಗೆ ಸುರತ್ಕಲ್ ಸಮೀಪದ ಮನೆಯೊಂದರ ಮೇಲ್ಛಾವಣಿ ಕುಸಿತ
ಸುರತ್ಕಲ್ ಸಮೀಪದ ಮಾಟೆಗುರಿ ಎಂಬಲ್ಲಿ ಗಾಳಿ ಸಹಿತ ಮಳೆಗೆ ನಿನ್ನೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಸುರತ್ಕಲ್ ಮಾಟೆಗುರಿ ನಿವಾಸಿ ರಮೇಶ್ ಎಂಬುವವರಿಗೆ ಸೇರಿದ ಮನೆಯಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲಿರುವ ಎಲ್ಲರೂ ಮಂಗಳೂರಿಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ...
ಹಳೆಯದಾದ ಮನೆಯಾದ್ದರಿಂದ ಜೋರಾಗಿ ಗಾಳಿ ಬೀಸಿರುವ ಕಾರಣ ಮನೆ ಕುಸಿದಿದೆ ಎಂದು ಶಂಕಿಸಲಾಗಿದೆ... ಮನೆಯ ಎಲ್ಲಾ ಸದಸ್ಯರು ಆರೋಗ್ಯವಾಗಿದ್ದಾರೆ ಮತ್ತು ಸದ್ಯಕ್ಕೆ ಹತ್ತಿರದಲ್ಲೇ ಒಂದು ಬಾಡಿಗೆ ಮನೆ ಪಡೆದುಕೊಂಡಿದ್ದಾರೆ...
Comments
0 comment