17ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಆಚರಿಸಿದ ಅಭಿಷೇಕ್ - ಐಶ್ವರ್ಯಾ ರೈ
ಅಭಿ - ಐಶ್ ವೆಡ್ಡಿಂಗ್ ಆನಿವರ್ಸರಿ
ಡಿವೋರ್ಸ್ಗೆ ಬಿತ್ತು ಬ್ರೇಕ್

 

ಬಾಲಿವುಡ್‌ನ ಸ್ಟಾರ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 17ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡಿದ್ದಾರೆ. ಏಪ್ರಿಲ್ 20ರಂದು ವಿವಾಹ ವಾರ್ಷಿಕೋತ್ಸವ ಸೆಲಿಬ್ರೇಟ್ ಮಾಡಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊ೦ಡು ಸಂಭ್ರಮಿಸಿದ್ದಾರೆ. ಅವರ ಜೊತೆ ಮಗಳು ಆರಾಧ್ಯಾ ಕೂಡ ಸಾಥ್ ನೀಡಿದ್ದಾರೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಈ ಫೋಟೋ ನೋಡಿದ ಬಳಿಕ ಡಿವೋರ್ಸ್ ಗಾಸಿಪ್‌ಗೆ ಬ್ರೇಕ್ ಸಿಕ್ಕಿದೆ.

ಕಳೆದ ಹಲವು ತಿಂಗಳುಗಳಿ0ದ ಅಭಿಷೇಕ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಬಿಗ್ ಟೌನ್‌ನಲ್ಲಿ ಕೇಳಿಸಿತ್ತು. ಅವರಿಬ್ಬರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸಿದ್ದರು. ಅಭಿಮಾನಿಗಳು ಕೂಡ ಅದನ್ನು ನಿಜ ಎಂದು ನಂಬುವ ಹಂತಕ್ಕೆ ಹೋಗಿದ್ದರು. ಆದರೆ ನಂತರದ ದಿನಗಳಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ರೈ ಜೊತೆಯಾಗಿ ಕೆಲವು ಕಾರ್ಯಕ್ರಮಗಳಿಗೆ ಹಾಜರಾದಾಗ ಗಾಸಿಪ್‌ಗಳಿಗೆ ಪೂರ್ಣವಿರಾಮ ಬಿತ್ತು. ಇನ್ನು ವಿವಾಹ ವಾರ್ಷಿಕೋತ್ಸವದಲ್ಲಿ ಜೊತೆಯಾಗಿಯೇ ಕಾಣಿಸಿಕೊಂಡಿದ್ದು ಇಬ್ಬರೂ ಸಹ ತಮ್ಮ instagram ಖಾತೆಯಲ್ಲಿ ಪೋಸ್ಟ್ ಹಾಕಿ ಕೊಂಡಿದ್ದಾರೆ. 

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು. ಆ ಬಳಿಕ ಅವರ ನಡುವೆ ಸ್ನೇಹ ಬೆಳೆಯಿತು. ನಂತರ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. 2007ರಲ್ಲಿ ಅವರಿಬ್ಬರು ಹಸೆಮಣೆ ಏರಿದರು. 2011ರಲ್ಲಿ ಐಶ್ವರ್ಯಾ ರೈ ಅವರು ಹೆಣ್ಣು ಮಗುವಿಗೆ (ಆರಾಧ್ಯಾ) ಜನ್ಮ ನೀಡಿದರು. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಸುಖ ಸಂಸಾರಕ್ಕೆ ಈಗ 17 ವರ್ಷ ತುಂಬಿದೆ.

ಬಾಲಿವುಡ್ ನಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸಖತ್ ಬೇಡಿಕೆ ಇದೆ. ತಮ್ಮದೇ ರೀತಿಯಲ್ಲಿ ಇಬ್ಬರೂ ಗುರುತಿಸಿಕೊಂಡಿದ್ದಾರೆ. ಅತ್ತ ಅಮಿತಾಭ್ ಬಚ್ಚನ್ ಕೂಡ ಫುಲ್ ಆಕ್ಟೀವ್ ಆಗಿದ್ದಾರೆ. ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಯ ಪುತ್ರಿ ಆರಾಧ್ಯಾ ಕೂಡ ವೇದಿಕೆಗಳಲ್ಲಿ ಮಾತನಾಡಿ ಗಮನ ಸೆಳೆಯುತ್ತಿದ್ದಾರೆ. ಅವರು ಯಾವಾಗ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!