ಪುತ್ತೂರು:  ಕಳವು ಪ್ರಕರಣದ ಆರೋಪಿ ಮುಂಬೈಯಲ್ಲಿ ಸೆರೆ.!
ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆ

ಪುತ್ತೂರು: ಅಡಿಕೆ ಸಾಗಾಟದ ಲಾರಿಯೊಂದರಿಂದ ಲಕ್ಷಾಂತರ ರೂ. ಹಣ ಕಳವು ಮಾಡಿದ ಆರೋಪಿಯನ್ನು ಪುತ್ತೂರು ಪೊಲೀಸರು ಮುಂಬೈಯಿಯಲ್ಲಿ ಬಂಧಿಸಿದ್ದಾರೆ.

ಪುತ್ತೂರಿನ ಅಝರ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಲಾರಿಯಲ್ಲಿ ಕಂಡಕ್ಟರ್ ಆಗಿದ್ದ ಹಾವೇರಿ ಜಿಲ್ಲೆಯ ಸವಣೂರು ನಿವಾಸಿ ಶಿವಕುಮಾರ್ ಯಾನೆ (20) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಆತ ಕಳವು ಮಾಡಿದ ರೂ. 10ಲಕ್ಷದ ಪೈಕಿ ರೂ. 3 ಲಕ್ಷದ 70 ಸಾವಿರ ರೂ. ವಶ ಪಡಿಸಿಕೊಂಡಿದ್ದಾರೆ. ಇದೀಗ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪತ್ತೆ ಕಾರ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರವರ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರವರ ನಿರ್ದೇಶನದಲ್ಲಿ ಪುತ್ತೂರು ವಿಭಾಗ ಡಿವೈಎಸ್ಪಿ ಗಾನಾ ಕುಮಾರರವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಠಾಣೆ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್ . ಸಿ.ಸ್ಕರಿಯಾ, ಜಗದೀಶ್, ಪಿ.ಸಿ.ಭೀಮಸೇನ, ಕಿರಣ್ ಕುಮಾರ್, ವಿನಾಯಕ ಮತ್ತು ಸಿ.ಡಿ.ಆರ್ ವಿಭಾಗದ ಸಂಪತ್, ದಿವಾಕರ ಇವರುಗಳು ಪತ್ತೆ ಕಾರ್ಯದಲ್ಲಿ ಸಹಕರಿಸಿರುತ್ತಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!