ಮಂಗಳೂರು: ಹೆಸರಿಗೆ "ಕ್ರೌನ್ ಇಂಟರ್ ನ್ಯಾಷನಲ್" ಯೂನಿಸೆಕ್ಸ್ ಸೆಲೂನ್ ಒಳಗಡೆ ಬೇರೆಯೇ ಲೋಕ
ಮಸಾಜ್ ಪಾರ್ಲರ್ ಲೋಕದ ಮತ್ತೊಂದು ಕರಾಳ ಮುಖ ಇಲ್ಲಿದೆ ನೋಡಿ

ಮಂಗಳೂರು: ನಗರದ ಹಲವೆಡೆ ಮಸಾಜ್‌ ಸೆಂಟರ್‌ ಹೆಸರಿನಲ್ಲಿ ಅಕ್ರಮ ದಂಧೆಗಳನ್ನ ನಡೆಸುತ್ತಿರುವ ಆರೋಪಗಳು ಪದೇ ಪದೇ ಕೇಳಿಬರುತ್ತಲೆ ಇದೆ. ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಕೆಲವೊಂದು ಕಡೆಗಳಲ್ಲಿ ಪೊಲೀಸ್‌ ದಾಳಿ ನಡೆಸಿದರು, ಇಂತಹ ಚಟುವಟಿಕೆಗಳನ್ನ ಸ್ಪಾ, ಸೆಲೂನ್‌ ಹೆಸರಿನಲ್ಲಿ ಸಮಾಜ ಘಾತುಕರು ನಡೆಸುತ್ತಾರೆ. ಮಂಗಳೂರು ನಗರದದಾಂತ್ಯ ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ ಹೆಸರಿನಲ್ಲಿ ಮಸಾಜ್ ಸೆಂಟರ್ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.!? ಇನ್ನೂ ಕೂಡ ಮಂಗಳೂರಿಗೆ ಕಪ್ಪು ಚುಕ್ಕೆಯಾಗಿಯೇ ಉಳಿದ ಮಸಾಜ್ ದಂಧೆ.?!

ರಾಜಾರೋಷವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ ಪೈಕಿ ಮಂಗಳೂರಿನ ಹೆಸರಾಂತ ಫೈವ್ ಸ್ಟಾರ್ ಗೋಲ್ಡ್ ಫಿಂಚ್ ಹೋಟೆಲ್ ನ ಕೆಳ ಅಂತಸ್ತಿನಲ್ಲಿ "ಕ್ರೌನ್ ಇಂಟರ್ ನ್ಯಾಷನಲ್" ಎಂಬ ಹೆಸರಿನ ಯೂನಿಸೆಕ್ಸ್ ಸೆಲೂನ್... ಹೆಸರಿಗೆ ಸೆಲೂನ್‌ ಇದರ ಅಸಲಿ ಕಹಾನಿ ಬೇರೆಯೇ ಇದೆ. ಮತ್ತಿನಲ್ಲಿ ಬರುವವರಿಗೆ ರೀಲಾಕ್ಸ್‌ ಮಾಡಲು ಇದೆ ಕಾಮಿನಿಯರ ದಂಡು. ಇಲ್ಲಿ ಡೈಲಿ ಕಸ್ಟಮರ್ಸ್‌ ಹಾಗೂ ಕರೆಗಳ ಮೂಲಕ ಬುಕ್ಕಿಂಗ್‌ ಮಾಡಿ ನಡೆಯುತ್ತೆ ಮಸಾಜ್ ಎಂಬ ಅಕ್ರಮ ಅನೈತಿಕ ಚಟುವಟಿಕೆ... "ಕ್ರೌನ್ ಇಂಟರ್ ನ್ಯಾಷನಲ್" ಯೂನಿಸೆಕ್ಸ್ ಸೆಲೂನ್ ಒಳಗಡೆ ನಡೆಯುತ್ತಿರುವುದು ಬರೀ ಮಸಾಜ್ ಮಾತ್ರವಲ್ಲ ಅನೈತಿಕ ದಂಧೆ ಎಂದರೂ ತಪ್ಪಾಗದು. ನಮ್ಮ ಮಾಧ್ಯಮದ ನಿರಂತರ ವರದಿ ನಂತರ ಕೆಲವು ಮಸಾಜ್ ಪಾರ್ಲರ್ ಗಳಿಗೆ ಬೀಗ ಜಡಿದರೂ ಕೂಡ ಈಗ ಪರಿಚಯಸ್ಥರ ಮುಖೇನ ಬಂದರೆ ಮಾತ್ರ ಅಪಾಯಿಂಟ್ ಮೆಂಟ್ ಸಿಗುವಷ್ಟು ಮುಂದುವರೆದಿದೆ...

ಮಂಗಳೂರಿನಲ್ಲಿ ಮಸಾಜ್‌ ಸೆಂಟರ್‌ಗಳಿಗೆಲ್ಲ ಬೀಗ ಬಿದ್ದಿದೆ ಎನ್ನುವಷ್ಟರಲ್ಲೇ ನಗರದಲ್ಲಿ ನಾಯಿಕೊಡೆಗಳಂತೆ "ಕ್ರೌನ್ ಇಂಟರ್ ನ್ಯಾಷನಲ್" ಯೂನಿಸೆಕ್ಸ್ ಸೆಲೂನ್ ಇಂತಹ ಹಲವು ಸೆಂಟರ್‌ಗಳು ಹುಟ್ಟಿಕೊಂಡಿದೆ.. ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಬೋರ್ಡ್ ಹಾಕಿಕೊಂಡು ಈ "ಕ್ರೌನ್ ಇಂಟರ್ ನ್ಯಾಷನಲ್" ಸಂಸ್ಥೆ ಅಕ್ರಮ ನಡೆಸುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. 

ನಮ್ಮ ಈ ವರದಿಯ ನಂತರ ಕೆಲವೊಂದು ಈ ಅನೈತಿಕ ಚಟುವಟಿಕೆ ನಂತರ ಸಂಪೂರ್ಣವಾಗಿ ಮುಚ್ಚಿದ್ದು, ಆದರೂ ಇನ್ನೂ ಚಾಲ್ತಿಯಲ್ಲಿರುವ ಪಾರ್ಲರ್ ಗಳ ಪೈಕಿ ಗೋಲ್ಡ್ ಫಿಂಚ್ ಕಟ್ಟಡದ ಕೆಳ ಅಂತಸ್ತಿನಲ್ಲಿರುವ "ಕ್ರೌನ್ ಇಂಟರ್ ನ್ಯಾಷನಲ್" ಯೂನಿಸೆಕ್ಸ್ ಸೆಲೂನ್ ಸಹಿತ    ಕಂಕನಾಡಿ ಗಣೇಶ್ ಮೆಡಿಕಲ್ ಸಮೀಪದ ಶಾಲಿಮಾರ್ ಬಿಲ್ಡಿಂಗ್, ಕೊಟ್ಟಾರ ಚೌಕಿ ಸಮೀಪ, ತೊಕ್ಕೊಟ್ಟು ಭಾಗದಲ್ಲಿ ಕೂಡ ಈ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ಅಬ್ಬಬ್ಬಾ.. ಇಷ್ಟೇಲ್ಲಾ ಮಸಾಜ್ ಪಾರ್ಲರ್  ಸೆಂಟರ್‌ಗಳು ತಲೆ ಎತ್ತುವ ವರೆಗೂ ಸಂಬಂಧಪಟ್ಟ ಇಲಾಖೆಗಳು ಬಂದ್‌ ಆಗಿದ್ದವೋ.. ಏನೋ.. ಗೊತ್ತಿಲ್ಲ ಒಟ್ಟಾರೆ ಮಂಗಳೂರಿಗೆ ಮಾರಕವಾಗುವ ರೀತಿಯಲ್ಲಿ ಈ ಪಾರ್ಲರ್  ಸೆಂಟರ್‌ಗಳು ತಲೆ ಎತ್ತಿವೆ.!? ಇದರ ವಿರುದ್ಧ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕ್ರಮ ಜರಗಿಸುವ ಅಗತ್ಯವಿದೆ. ಇಂತಹ ಅಕ್ರಮಕ್ಕೆ ಮಂಗಳೂರಿನ ಮಾನ್ಯ ಕಮೀಷನರ್ ಕುಲದೀಪ್ ಜೈನ್ ಅವರು ಸಂಪೂರ್ಣವಾಗಿ ಬ್ರೇಕ್ ಬೀಳುವ ಹಾಗೆ ಮಾಡಿ ಮತ್ತೆ ಯಾವತ್ತೂ ಇತಂಹ ದಂಧೆ ತಲೆ ಎತ್ತದ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!