ಮಂಗಳೂರು: ಸಮಾಜದ ದಾರಿ ತಪ್ಪಿಸುವ "ಕ್ರೌನ್ ಇಂಟರ್ ನ್ಯಾಷನಲ್" ಸೆಲೂನ್‌.!
ಸೈಲೆಂಟಾಗಿ ನಡೆಯುತ್ತೆ ಅನೈತಿಕ ದಂಧೆ.!

ಮಂಗಳೂರಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ ಪೈಕಿ ಮಂಗಳೂರಿನ ಹೆಸರಾಂತ ಫೈವ್ ಸ್ಟಾರ್ ಗೋಲ್ಡ್ ಫಿಂಚ್ ಹೋಟೆಲ್ ನ ಕೆಳ ಅಂತಸ್ತಿನಲ್ಲಿರುವ "ಕ್ರೌನ್ ಇಂಟರ್ ನ್ಯಾಷನಲ್" ಎಂಬ ಹೆಸರಿನ ಯೂನಿಸೆಕ್ಸ್ ಸೆಲೂನ್ ಕೂಡ ಒಂದು. ಹೆಸರಿಗೆ ಮಾತ್ರ ಸೆಲೂನ್‌.. ಮತ್ತಿನಲ್ಲಿ ಬರುವವರಿಗೆ ರೀಲಾಕ್ಸ್‌ ಮಾಡಿ ದಿಕ್ಕು ತಪ್ಪಿಸಲು ಒಳಗಡೆ ಕಾಯುತ್ತಿರುತ್ತಾರೆ ಕಾಮಿನಿಯರು. 

ಫೈವ್ ಸ್ಟಾರ್ ಗೋಲ್ಡ್ ಫಿಂಚ್ ಕಟ್ಟಡದಲ್ಲಿ "ಷೆರ್ಲಾಕ್" ಹೆಸರಿನ ಪಬ್‌ ಕಾರ್ಯಚರಿಸುತ್ತಿದೆ. ಕತ್ತಲಾದರೆ ಸಾಕು ಒಳಗಡೆ ಭರ್ಜರಿ ಪಾರ್ಟಿ ನಡೆಯುತ್ತಿದೆ. ಇಲ್ಲಿ ಕುಡಿದು ಕುಪ್ಪಲಿಸಿ ನಂತರ ಬರುವುದೆ ಈ ಕ್ರೌನ್ ಇಂಟರ್ ನ್ಯಾಷನಲ್ ಮಸಾಜ್‌ ಸೆಂಟರ್‌ಗೆ ಒಳಗಡೆ ಹೋದವರಿಗೆ ಬೇಕು ಬೇಕಾದ ಎಲ್ಲಾ ವ್ಯವಸ್ಥೆಗಳು ಸಿದ್ಧವಿರುತ್ತದೆ. ಮತ್ತಿನಲ್ಲಿ ಬರುವ ಜನರ ದಿಕ್ಕು ತಪ್ಪಿಸುವ ಈ ಅನೈತಿಕ ಚಟುವಟಿಕೆಯ ದಂಧೆ ಕ್ರೌನ್ ಇಂಟರ್ ನ್ಯಾಷನಲ್ ಯೂನಿಸೆಕ್ಸ್ ಸೆಲೂನ್ ಸೇರಿದಂತೆ ಹಲವು ಕಡೆಗಳಲ್ಲಿ ನಡೆಯುತ್ತೆ.

ಇಲ್ಲಿ ಡೈಲಿ ಕಸ್ಟಮರ್ಸ್‌ ಹಾಗೂ ಕರೆಗಳ ಮೂಲಕ ಬುಕ್ಕಿಂಗ್‌ ಮಾಡಿ ನಡೆಯುತ್ತೆ ಮಸಾಜ್ ಎಂಬ ಅಕ್ರಮ ಅನೈತಿಕ ಚಟುವಟಿಕೆ. "ಕ್ರೌನ್ ಇಂಟರ್ ನ್ಯಾಷನಲ್" ಯೂನಿಸೆಕ್ಸ್ ಸೆಲೂನ್ ಒಳಗಡೆ ನಡೆಯುತ್ತಿರುವುದು ಬರೀ ಮಸಾಜ್ ಮಾತ್ರವಲ್ಲ ಅನೈತಿಕ ಚಟುವಟಿಕೆ. ನಮ್ಮ ಮಾಧ್ಯಮದ ನಿರಂತರ ವರದಿ ನಂತರ ಕೆಲವು ಮಸಾಜ್ ಪಾರ್ಲರ್ ಗಳಿಗೆ ಬೀಗ ಜಡಿದರೂ ಕೂಡ ಈ ಕ್ರೌನ್ ಇಂಟರ್ ನ್ಯಾಷನಲ್ ಮಾತ್ರ ಇದರ ಅಕ್ರಮ ಕಾರ್ಯವನ್ನು ನಡೆಸುತ್ತಲೇ ಇದೆ.

ಈ ರೀತಿ ಅಕ್ರಮ ನಡೆಯುತ್ತಿದ್ದರು ಯಾವ ಕ್ರಮವೂ ಜರಗುತ್ತಿಲ್ಲ ಆಂದರೆ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದು ಪಕ್ಕಾ.!? ಇಂತಹ ಅನೈತಿಕ ಚಟುವಟಿಕೆ ನಡೆಸುತ್ತಾ ಜನರ, ಊರಿನ ದಿಕ್ಕು ತಪ್ಪಿಸಿ ಮಂಗಳೂರಿಗೆ ಮಾರಕವಾಗುತ್ತಿರುವುದು ಯಾರ ಗಮನಕ್ಕೂ ಬರುತ್ತಿಲ್ಲ. ಇದೂ ಹೀಗೆ ಬಿಟ್ಟರೆ ಯಾವ ರೀತಿಯಾಗಿ ಬೆಳೆದು ನಿಲ್ಲುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.

ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಬೋರ್ಡ್ ಹಾಕಿಕೊಂಡು ಈ "ಕ್ರೌನ್ ಇಂಟರ್ ನ್ಯಾಷನಲ್" ಸಂಸ್ಥೆ ಅಕ್ರಮ ನಡೆಸುತ್ತಿದೆ. ಇಷ್ಟೇಲ್ಲಾ ಮಸಾಜ್ ಪಾರ್ಲರ್  ಸೆಂಟರ್‌ಗಳು ತಲೆ ಎತ್ತುವ ವರೆಗೂ ಸಂಬಂಧಪಟ್ಟ ಇಲಾಖೆಗಳು ಬಂದ್‌ ಆಗಿದ್ದವೋ.. ಏನೋ.. ಗೊತ್ತಿಲ್ಲ ಒಟ್ಟಾರೆ ಮಂಗಳೂರಿಗೆ ಮಾರಕವಾಗುವ ರೀತಿಯಲ್ಲಿ ಈ ಪಾರ್ಲರ್  ಸೆಂಟರ್‌ಗಳು ತಲೆ ಎತ್ತಿವೆ.!? ಇದರ ವಿರುದ್ಧ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕ್ರಮ ಜರಗಿಸುವ ಅಗತ್ಯವಿದೆ. ಇಂತಹ ಅಕ್ರಮಕ್ಕೆ ಮಂಗಳೂರಿನ ಮಾನ್ಯ ಕಮೀಷನರ್ ಕುಲದೀಪ್ ಜೈನ್ ಅವರು ಸಂಪೂರ್ಣವಾಗಿ ಬ್ರೇಕ್ ಬೀಳುವ ಹಾಗೆ ಮಾಡಿ ಮತ್ತೆ ಯಾವತ್ತೂ ಇತಂಹ ದಂಧೆ ತಲೆ ಎತ್ತದ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!