ಸಂಭ್ರಮದ ನಡುವೆ ಶಾಲೆಯಲ್ಲಿ ಸೂತಕದ ಛಾಯೆ..! - ಅಪಘಾತದಲ್ಲಿ ಶಿಕ್ಷಕ ಮೃತ್ಯು
ಸಂಭ್ರಮದ ನಡುವೆ ಶಾಲೆಯಲ್ಲಿ ಸೂತಕದ ಛಾಯೆ..! - ಅಪಘಾತದಲ್ಲಿ ಶಿಕ್ಷಕ ಮೃತ್ಯು

ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕರೊಬ್ಬರಿಗೆ ಬೋಲೆರೋ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕುಮಟಾದಲ್ಲಿ ನಡೆದಿದೆ. 

ಕುಮಟಾದ ಹಳಕಾರ ಕ್ರಾಸ್ ಸಮೀಪ ನಡೆದಿದೆ. ಇವರು ಗುಡೆ ಅಂಗಡಿ ಶಾಲೆ ಶಿಕ್ಷಕಗಾಗಿ ಕಾರ್ಯನಿರ್ವಹಿಸುತ್ತಿದ್ದು, ಧ್ವಜಾರೋಹಣಕ್ಕೆಂದು ಬೆಳಿಗ್ಗೆ ಮನೆಯಿಂದ ತೆರಳಿದ್ದರು. ಎದುರಿನಿಂದ ವೇಗವಾಗಿ ಬಂದ ಬೋಲೆರೋ ಡಿಕ್ಕಿ ಹೊಡೆದಿದೆ.

ಈ ವೇಳೆ ಶಿಕ್ಷಕ ಗೋಪಾಲ ಪಟಗಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!