ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವನ ಕುತಂತ್ರ ಬಯಲು; ಪೊಲೀಸ್ ಎಂದು ವಂಚಿಸುತ್ತಿದ್ದ ಬೆನೆಡಿಕ್ಟ್ ಸಾಬು ಅರೆಸ್ಟ್..!
ಕೇರಳದಿಂದ ಮಂಗಳೂರಿಗೆ ಬಂದು ಖತರ್ನಾಕ್ ಬುದ್ಧಿ ತೋರಿಸಿದ ನರ್ಸಿಂಗ್ ವಿದ್ಯಾರ್ಥಿ

ಮಂಗಳೂರಿನ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ಬಿಂಬಿಸಿ ವಂಚನೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಮೂಲದ ವಿದ್ಯಾರ್ಥಿ ಮಂಗಳೂರಿಗೆ ಬಂದು ಖತರ್ನಾಕ್ ಬುದ್ಧಿ ತೋರಿಸಿದ್ದಾನೆ. ಆರೋಪಿಯನ್ನು ಬಂಧಿಸಿದ್ದಾರೆ.

ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ತಾನು ಪೊಲೀಸ್ ಅಧಿಕಾರಿಯೆಂದು ಬಿಂಬಿಸಿದ್ದಾನೆ. ಬಂಧಿತನನನ್ನು ಕೇರಳ ಮೂಲದ ವಿದ್ಯಾರ್ಥಿ ಬೆನೆಡಿಕ್ಟ್ ಸಾಬು (22) ಎಂದು ಗುರುತಿಸಲಾಗಿದೆ. 

ಆರೋಪಿ ವಂಚಿಸುತ್ತಿದ್ದ ಬಗ್ಗೆ ಉರ್ವಾ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಬಂಧೀತ ಆರೋಪಿ ಬಳಿಯಿಂದ ಖಂW, ಕೇರಳ ಸ್ಟೇಟ್ ಪೊಲೀಸ್ ಮತ್ತು ಅಗ್ರಿಕಲ್ಟರ್ ಡಿಪಾರ್ಟೆಂಟ್ ಅಂಡ್ ಫಾರ್ಮಸ್ ವೆಲ್ವೇ ಡಿಪಾರ್ಟೆಂಟ್ ಕೇರಳ ಹೆಸರಿನಲ್ಲಿ ನಕಲಿ ಐಡಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ಪಿಎಸ್‌ಐ ಸಮವಸ್ತ್ರ ಪೊಲೀಸ್ ಲೋಗೊ, ಮೆಡಲ್, ಬೆಲ್ಟ್, ಕ್ಯಾಪ್, ಒಂದು ಲ್ಯಾಪ್‌ಟಾಪ್, ಎರಡು ಮೊಬೈಲ್ ಸೆಟ್ ಗಳನ್ನು ವಶಪಡಿಸಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಬೆನೆಡಿಕ್ಟ್ ಸಾಬು ಇಡುಕ್ಕಿ ಜಿಲ್ಲೆಯ ಅಂಬಚ್ಚಾಲ್, ಪಳ್ಳಿವಾಸಿಲ್ ನಿವಾಸಿಯೆಂದು ಪೊಲೀಸರು ಗುರುತಿಸಿದ್ದಾರೆ. ಕಾಲೇಜಿನಲ್ಲಿ ಜಾಗೃತಿ ಕಾರ್ಯಾಗಾರ ನಡೆಸುತ್ತಿದ್ದಾಗ ವಿದ್ಯಾರ್ಥಿಗಳು ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ ವಂಚನೆಗೆ ಒಳಗಾದವರಿದ್ದರೆ, ಉರ್ವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮನವಿ ಮಾಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!