ಸುಳ್ಯದಲ್ಲಿ ಹಗಲು ದರೋಡೆ.! ಮನೆಗೆ ನುಗ್ಗಿದ ಕಳ್ಳರು ನಗ ನಗದು ದೋಚಿದರು
ಹಾಡಹಗಲೇ ಮನೆಗೆ ನುಗ್ಗಿದ ಖದೀಮರು - ಪೊಲೀಸರಿಂದ ತನಿಖೆ

ಸುಳ್ಯ:  ಮನೆಯೊಂದಕ್ಕೆ ನುಗ್ಗಿ ಕಳ್ಳರು ಹಗಲು ದರೋಡೆ ಮಾಡಿದ ಘಟನೆ ಜಾಲ್ಸೂರು ಕದಿತಡ್ಕ ಎಂಬಲ್ಲಿ ನಡೆದಿದೆ.

ವಸಂತ್ ರೈ ಎಂಬವರ ಮನೆಯಲ್ಲಿ ಹಾಡಹಗಲೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಮನೆಯವರು ಕೆಲಸಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲಿನಿಂದ ಬಂದ ಕಳ್ಳರು 5 ಪವನ್ ಚಿನ್ನ ಮತ್ತು 10 ಸಾವಿರ ನಗದು ದೋಚಿದ್ದಾರೆ ಎನ್ನಲಾಗಿದೆ.

ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯವರು ಊಟಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!