ಮಂಗಳೂರು: ಆಪದ್ಬಾಂಧವ ಆಸೀಫ್‌ ಅರೆಸ್ಟ್.!
ಸೆಕ್ಯುರಿಟಿ ಸಿಬಂದಿ ಮೇಲೆ ಹಲ್ಲೆ, ಅನುಚಿತ ವರ್ತನೆ.!

ಮಂಗಳೂರು : ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯುರಿಟಿ ಸಿಬಂದಿ ಮೇಲೆ ಆಪದ್ಬಾಂಧವ ಸಂಘಟನೆಯ ಆಸೀಫ್‌ ಅನುಚಿತ ವರ್ತನೆ ತೋರಿ ಹಲ್ಲೆ ಮಾಡಿದ್ದಾರೆ ಎಂದು  ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಆಸಿಫ್  ನ್ನು ಬಂಧಿಸಿದ್ದಾರೆ.

ಆಸಿಫ್ ಬುಧವಾರ ಸಂಜೆ ವೆನ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆತಂದಿದ್ದರು.  ರೋಗಿಗಳನ್ನು ಒಳಗಡೆ ಕರೆದೊಯ್ದು ಅಡ್ಮಿಶನ್ ಮಾಡುತ್ತಿದ್ದಾಗ ಸೆಕ್ಯುರಿಟಿ ಗಾರ್ಡ್ ಸಿಬಂದಿ ವಾಹನವನ್ನು ಹೊರಗೆ ಒಯ್ಯುವಂತೆ ಸೂಚಿಸಿದ್ದಾರೆ. ಆದರೆ ರೋಗಿಗಳನ್ನು ಅಡ್ಮಿಶನ್ ಮಾಡುತ್ತಿದ್ದೇನೆ, ಸ್ವಲ್ಪ ಹೊತ್ತು ಕಾಯಿರಿ ಎಂದು ಆಸಿಫ್ ಹೇಳಿದ್ದಾರೆ.

ಹೊತ್ತಾದರೂ ವಾಹನವನ್ನು ತೆರವು ಮಾಡದ್ದಕ್ಕೆ ಮಹಿಳಾ ಸಿಬಂದಿ ವಾಹನ ತೆಗೆಯುವಂತೆ ಹೇಳಿದ್ದು, ಆಸಿಫ್ ಮತ್ತು ಮಹಿಳಾ ಸಿಬಂದಿ ನಡುವೆ ಮಾತಿಗೆ ಮಾತಾಗಿತ್ತು. ಈ ವೇಳೆ, ಸಿಬಂದಿಯನ್ನು ದೂಡಿ ಕೈಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಆಸ್ಪತ್ರೆ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಆಸಿಫ್ ನ್ನು ಕರೆದೊಯ್ದಿದ್ದಾರೆ. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!