ಉಡುಪಿ: ಬಂದರು ಪ್ರದೇಶದಿಂದ 18 ಲಕ್ಷ ಮೌಲ್ಯದ ಸ್ವತ್ತು ಕದ್ದ ಕಳ್ಳರು ಅರೆಸ್ಟ್.!
ಹೆಜಮಾಡಿ ಕೋಡಿ ಬಂದರು ಪ್ರದೇಶದಿಂದ 18 ಲಕ್ಷ ರೂ. ಮೌಲ್ಯದ ಸ್ವತ್ತು ಕಳವು - ಐವರ ಬಂಧನ

ಉಡುಪಿ: ಹೆಜಮಾಡಿ ಕೋಡಿ ಬಂದರು ಪ್ರದೇಶದಿಂದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಕಬ್ಬಿಣದ ಶೀಟುಗಳನ್ನು ಮತ್ತು ರಾಡ್‌ಳನ್ನು ಕಳವು ಮಾಡಿದ್ದ ಐವರನ್ನು ಪಡುಬಿದ್ರಿ ಪೋಲಿಸರು ಬಂಧಿಸಿದ್ದಾರೆ. 

ಆಗಸ್ಟ್ 24 ರಿಂದ ಸೆಪ್ಟೆಂಬರ್ 25ರ ಅವಧಿಯಲ್ಲಿ ಕಳ್ಳರು ಸುಮಾರು ರೂ. 18,00,078 ಮೌಲ್ಯದ ಕಬ್ಬಿಣದ ಶೀಟುಗಳನ್ನು ಮತ್ತು ರಾಡ್ ಗಳನ್ನು ಹೆಜಮಾಡಿ ಕೋಡಿ ಬಂದರು ಪ್ರದೇಶದಿಂದ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಸಿಪಿಐ ಕಾಪು ಇವರ ನೇತ್ರತ್ವದಲ್ಲಿ ಪಿ.ಎಸ್.ಐ ಪಡುಬಿದ್ರಿ ಮತ್ತು ಸಿಬ್ಬಂದಿಯವರು ನಡೆಸಿ ಆರೋಪಿಗಳಾದ ಮೊಹಮ್ಮದ್ ಹಸೀಬ್, ನಿಜಾಮುದ್ದೀನ್ ಮೊಹಮ್ಮದ್ ಹಫೀಜ್, ಮೊಹಮ್ಮದ್ ಆಶಿರ್.ಕೆ ಮತ್ತು ಆರೋಪಿಗಳಿಂದ ಕಳವು ಮಾಲುಗಳನ್ನು ಸ್ವೀಕರಿಸಿದ ಆರೋಪಿ ಹಂಝಾ ಬೆಳ್ತಂಗಡಿ ರವರನ್ನು ದಸ್ತಗಿರಿಗೊಳಿಸಿ, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇನ್ನು ಆರೋಪಿಗಳಿಂದ ರುಪಾಯಿ 5,76,653 ಮೌಲ್ಯದ 86 ಕಬ್ಬಿಣದ ಎಂ.ಎಸ್. ಶೀಟುಗಳು, ರೂ. 61,382/ಮೌಲ್ಯದ ಕಬ್ಬಿಣದ ರಾಡ್ ಗಳು- ರೂ. 3,00,000 ಟಾಟಾ ಏಸ್ ವಾಹನ, ರೂ. 5,00,000 ಪಿಕ್‌ಅಪ್ ವಾಹನ ಮತ್ತು ರೂ. 7,00,000 ಇನೋವಾ ಕಾರನ್ನು ವಶಪಡಿಸಿಕೊಳ್ಳಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!