ಮಂಗಳೂರು: ಹಿಟ್ ಅಂಡ್ ರನ್ - ಯುವತಿ ಸ್ಪಾಟ್ ಡೆತ್.!
ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಹರಿದ ಕಾರು - ಸ್ಪಾಟ್ ಡೆತ್

ಮಂಗಳೂರು : ಮಂಗಳೂರಿನ ಲೇಡಿಹಿಲ್ ಬಳಿ ನಡೆದ ಭೀಕರ ಅಪಘಾತಕ್ಕೆ ಒರ್ವ ಯುವತಿ ಸಾವನ್ನಪ್ಪಿದ್ದು ಒರ್ವ ಬಾಲಕಿ ಸಹಿತ ನಾಲ್ವರು ಗಾಯಗೊಂಡಿದ್ದಾರೆ. ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿದ ಚಾಲಕ ಲೇಡಿ ಹಿಲ್ ಬಳಿ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರ ಗುಂಪಿನ ಮೇಲೆ ವಾಹನ ಹರಿಸಿದ್ದಾನೆ.

ಮೃತ ಯುವತಿಯನ್ನು ಸುರತ್ಕಲ್ ಬಾಲ ನಿವಾಸಿ ರೂಪ(23) ಎಂದು ಗುರುತಿಸಲಾಗಿದೆ. ಘಟನೆ ಇಂದು ಮಧ್ಯಾಹ್ನದ ವೇಳಗೆ ನಡೆದಿದೆ ಎನ್ನಲಾಗಿದೆ.

ಕೃತಿಕಾ, ಯತಿಕಾ, ಹಿತನ್ವಿ ಹಾಗೂ ರೂಪ ಲೇಡಿ ಹಿಲ್ ರಸ್ತೆಯಲ್ಲಿ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತಿದ್ದ ಸಂದರ್ಭ ಅತಿವೇಗವಾಗಿ ಬಂದು ಫುಟ್ ಪಾತ್ ಏರಿ ಯುವತಿಯರ ಮೇಲೆ ಹರಿದ ಪರಿಣಾಮ ರೂಪ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಗಾಡಿ ಅಪಘಾತ ನಡೆಸಿದ ನಂತರ ಗಾಡಿಯ ಬ್ರೇಕ್ ಫೇಲ್ಯೂರ್ ಆಗಿದೆ ಎಂದು ಸುಳ್ಳು ಹೇಳಿ ಶೋ ರೂಮ್ ನಲ್ಲಿ ಇಟ್ಟಿದ್ದ ಎನ್ನಲಾಗಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರು ಮತ್ತು ಕಾರಿನ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!