ಕಡಬ: ದರ್ಗಾಕ್ಕೂ ಕನ್ನ ಹಾಕಿದ ಚೋರರು -  30 ಸಾವಿರಕ್ಕೂ ಅಧಿಕ ಹಣ ಕಳವು
ಕಡಬ: ದರ್ಗಾಕ್ಕೂ ಕನ್ನ ಹಾಕಿದ ಚೋರರು - 30 ಸಾವಿರಕ್ಕೂ ಅಧಿಕ ಹಣ ಕಳವು

ಕಡಬ: ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ದರ್ಗಾದ ಬಾಗಿಲಿನ ಬೀಗ ಮುರಿದ ಕಳ್ಳರು ಒಳಗಿದ್ದ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ತಡರಾತ್ರಿ ಸುಮಾರು 2.20ರ ವೇಳೆಗೆ ಕಳ್ಳರು ಕೈಚಳಕ ತೋರಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಕಳೆದ ವರ್ಷವೂ ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ಬೈಕಿನಲ್ಲಿ ಬಂದು ಕೃತ್ಯ ಎಸಗಿರುವುದು ದರ್ಗಾದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು . ಬೈಕಿನಲ್ಲಿ ಬಂದ ಇಬ್ಬರು ದರ್ಗಾದ ಬೀಗವನ್ನು ಒಡೆದು ಒಳನುಗ್ಗಿದ್ದರು.

ದರ್ಗಾದ ಕಬ್ಬಿಣದ ಬಾಗಿಲಿಗೆ 2 ಬೀಗಗಳನ್ನು ಹಾಕಲಾಗಿದ್ದು, ಒಂದು ಬೀಗವನ್ನು ಒಡೆದಿರುವ ಕಳ್ಳರು, ಎರಡನೇ ಬೀಗವನ್ನು ಒಡೆಯಲಾಗದ ಕಾರಣ ಬಾಗಿಲಿನ ಚಿಲಕವನ್ನೇ ಮುರಿದಿದ್ದರು. ದರ್ಗಾದಲ್ಲಿದ್ದ ಸುಮಾರು 30 ಸಾವಿರ ರೂ.ಗೂ ಅಧಿಕ ಹಣವನ್ನು ಕದ್ದೊಯ್ದಿದ್ದರು. ಆದರೆ ಕಳ್ಳರ ಜಾಡು ಹಿಡಿಯಲು ಸಾಧ್ಯವಾಗಿಲ್ಲ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!