ಮಂಗಳೂರು: ಅಕ್ರಮ ಸಾರಾಯಿ ಘಟಕ - ಅಬಕಾರಿ ಇಲಾಖೆ ದಾಳಿ.!
ಅಕ್ರಮ ಸಾರಾಯಿ ಘಟಕ
2240 ಲೀಟರ್ ಸ್ಪಿರಿಟ್ ಹಾಗೂ 222 ಲೀಟರ್ ನಕಲಿ ಲಿಕ್ಕರ್ ವಶ

ಮಂಗಳೂರು: ಅಕ್ರಮ ಸಾರಾಯಿ ಘಟಕಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 2240 ಲೀಟರ್ ಸ್ಪಿರಿಟ್ ಹಾಗೂ 222 ಲೀಟರ್ ನಕಲಿ ಲಿಕ್ಕರ್ ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕಿನ್ಯ ಗ್ರಾಮದ ಸಾಂತ್ಯ ಎಂಬಲ್ಲಿ ನಡೆದಿದೆ.

 ಸಾಂತ್ಯ ನಿವಾಸಿ ನಿತ್ಯಾನಂದ ಭಂಡಾರಿ ಎಂಬಾತನ ಮನೆಗೆ ದಾಳಿ ಮಾಡಿದ್ದು, ಕಿನ್ಯದಲ್ಲಿ ಸ್ಪಿರಿಟ್ ಮಾರಾಟ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದಾರೆ. ಕೇರಳಕ್ಕೆ ಸಾಗಾಟ ನಡೆಸಲು ಆರೋಪಿ ಈ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಈ ಸಂದರ್ಭ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ವಲಯ-2 ಅಬಕಾರಿ ನಿರೀಕ್ಷಕ ಕಮಲಾ ಹೆಚ್.ಎನ್, ಉಪಾಧೀಕ್ಷಕರುಗಳಾದ ಸೈಯ್ಯದ್ ತಫ್ಝೀಲುಲ್ಲಾ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗದ ನಾಗರಾಜಪ್ಪ ಟಿ. ಹಾಗೂ ಡೆಪ್ಯುಟಿ ಕಮೀಷನರ್ ಎಕ್ಸೈಸ್ ಟಿ.ಎಂ ಶ್ರೀನಿವಾಸ್ ನಿರ್ದೇಶನದಲ್ಲಿ ನಡೆದ ದಾಳಿಯಲ್ಲಿ ಸುಮಾರು 25 ಕ್ಕೂ ಅಧಿಕ ಅಬಕಾರಿ ಅಧಿಕಾರಿಗಳು ಭಾಗವಹಿಸಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!