ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ - ಇಬ್ಬರು ಪೊಲೀಸರ ವಶಕ್ಕೆ.!
ವೇಶ್ಯಾವಾಟಿಕೆ ದಂಧೆ
ಬೆಂಗಳೂರು, ಮೈಸೂರಿನಿಂದ ಬರ್ತಿದ್ದ ಕಾಲ್‌ಗರ್ಲ್ಸ್

ರಾಜ್ಯದ ಹಲವು ಮಹಾನಗರಗಳಲ್ಲಿ ಅಕ್ರಮವಾಗಿ ಡ್ರಗ್ಸ್‌ ಮತ್ತು ಇತರೆ ಅನೈತಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಈಗ ವೇಶ್ಯಾವಾಟಿಕೆ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಶಿವಮೊಗ್ಗ ನಗರದಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಮೂವರು ಮಹಿಳೆಯರು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸೂಕ್ತ ಮಾಹಿತಿ ಆಧಾರದಲ್ಲಿ ವೈಶ್ಯವಾಟಿಕೆ ಅಡ್ಡೆಯ ಮೇಲೆ ಶಿವಮೊಗ್ಗದ ಜಯನಗರ ಠಾಣೆಯ ಪೊಲೀಸರು  ಗಾಂಧಿನಗರದ 1ನೇ ಪ್ಯಾರಲಲ್ ರಸ್ತೆಯಲ್ಲಿರುವ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಮಹಿಳೆಯರು ಮತ್ತು ಇಬ್ಬರು ಗಂಡಸರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಯನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ ಅವರ ನೇತೃತ್ವದಲ್ಲಿ ನಡೆದ ದಾಳಿ ಮಾಡಲಾಗಿದ್ದು, ಅಲ್ಲಿ ಸಿಕ್ಕಿಬಿದ್ದವರನ್ನು ವಿಚಾರಣೆ ಮಾಡಿದಾಗ ಮತ್ತಷ್ಟು ಸ್ಪೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಶಿವಮೊಗ್ಗದ ಏಜೆಂಟ್ ಗಂಗಾಧರ್ ಎಂಬಾತ ಮೈಸೂರು, ಬೆಂಗಳೂರು ಮೊದಲಾದ ಮಹಾನಗರಗಳಿಂದ ಕಾಲ್‌ ಗರ್ಲ್ಸ್‌ ರೀತಿ ಕೆಲಸ ಮಾಡುವ ಮಹಿಳೆಯರನ್ನ ಕರೆಯಿಸಿ ದಂಧೆ ನಡೆಸುತ್ತಿದ್ದನು. ಇನ್ನು ಪೊಲೀಸರ ದಾಳಿಯ ವೇಳೆ ಸ್ಥಳೀಯ ಓರ್ವ ಮಹಿಳೆ, ಬೆಂಗಳೂರು ಮತ್ತು ಮೈಸೂರಿನಿಂದ ಬಂದ ಮಹಿಳೆಯರ ರಕ್ಷಣೆ ಮಾಡಲಾಗಿದೆ. ಈ ಘಟನೆಗೆ ಕುರಿತಂತೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!