ಕಾರ್ಕಳ: ಯುವತಿಯ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಚಪಲಚೆನ್ನಿಗರಾಯ.!!
ಕಾರ್ಕಳದಲ್ಲಿ ಸಿಕ್ಕಿಬಿದ್ದ ರೋಡ್ ರೋಮಿಯೊ - ಸಾರ್ವಜನಿಕರಿಂದ ಫುಲ್ ಕ್ಲಾಸ್

ಕಾರ್ಕಳ: ಯುವತಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೊ ಜಗದೀಶ್ ಎಂಬಾತನನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಜನ ಹಿಗ್ಗಾಮುಗ್ಗಾ ಬೈದ ಘಟನೆ ಕಾರ್ಕಳದಲ್ಲಿ ಬುಧವಾರ ನಡೆದಿದೆ.

ಕಾರ್ಕಳದ ಖಾಸಗಿ ಪೈನಾನ್ಸ್ ಒಂದರಲ್ಲಿ ಅಕೌಂಟೆ0ಟ್ ಆಗಿದ್ದ ಯುವತಿಗೆ ಈತ ವಿನಾಕಾರಣ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಗುಂಪು ವ್ಯಕ್ತಿಯನ್ನು ಕಾರ್ಕಳ ಬಸ್ ನಿಲ್ದಾಣದಲ್ಲಿ ಹಿಡಿದ್ದಾರೆ. ಕಾಮುಕ ವ್ಯಕ್ತಿಯನ್ನು ಇರ್ವತ್ತೂರಿನ ಜಗದೀಶ್ ಪೂಜಾರಿ ಎನ್ನಲಾಗಿದೆ. 

ಈತ ಕಳೆದ ಹಲವು ದಿನಗಳಿಂದ ಕಾರ್ಕಳದಲ್ಲಿ ಕೆಲಸದಲ್ಲಿದ್ದ ನಂದಳಿಕೆ ಗ್ರಾಮದ ಯುವತಿಯನ್ನು ಪದೇಪದೇ ಹಿಂಬಾಲಿಸಿ ಅಡ್ಡಗಟ್ಟಿ ಮಾತನಾಡಿಸಲು ಯತ್ನಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಬುಧವಾರ ಸಂಜೆ ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದಾಗ ಸ್ಥಳೀಯರು ಚಪಲಚೆನ್ನಿಗರಾಯನನ್ನು ಹಿಡಿದು ಎಳೆದಾಡಿ ಹಿಗ್ಗಾಮುಗ್ಗಾ ಬೈದು ಸಾರ್ವಜನಿಕವಾಗಿ ಮಾನ ಹರಾಜು ಮಾಡಿದ್ದಾರೆ. ಈ ಘಟನೆಯ ಬಳಿಕ ಯುವತಿ ಈತನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಜಗದೀಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!