ಮಂಗಳೂರು ವಿ.ವಿ ಕುಲಪತಿಯ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿದ ಖದೀಮರು..!
ಮಂಗಳೂರು ವಿ.ವಿ ಕುಲಪತಿಯ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿದ ಖದೀಮರು..!

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಯಾಗಿರುವ ಪ್ರೊ.ಜಯರಾಜ್ ಅಮೀನ್ ಅವರ ಛಾಯಾಚಿತ್ರವನ್ನು ಬಳಸಿಕೊಂಡು ನಂಬರಿಂದ ವಾಟ್ಸಪ್ ಖಾತೆಯನ್ನು ಸೃಷ್ಟಿ ಮಾಡಿ ಹಲವು ಸಂದೇಶಗಳು ಪ್ರಾಧ್ಯಾಪಕರಿಗೆ ಹಾಗೂ ಇತರರಿಗೆ ರವಾನೆಯಾಗಿದ್ದು, ಈ ಕುರಿತು ಕುಲಪತಿಯವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಶನಿವಾರ ಮಧ್ಯಾಹ್ನದಿಂದ ಇಂತಹ ಸಂದೇಶಗಳು ಈ ನಕಲಿ ಖಾತೆಯಿಂದ ರವಾನೆಯಾಗಿದ್ದು, ಈ ಬಗ್ಗೆ ಹಲವು ಪ್ರಾಧ್ಯಾಪಕರು ಕುಲಪತಿಯವರ ಗಮನಕ್ಕೆ ತಂದಿದ್ದರು. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನುಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!