ಬಂಟ್ವಾಳ: ಮಾನಭಂಗಕ್ಕೆ ಯತ್ನ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿಗೆ ಬಿತ್ತು ಚಪ್ಪಲಿ ಏಟು.!
ಮಹಿಳೆಯನ್ನು ಚುಡಾಯಿಸಿದ ಸ್ಟೀವನ್ ಆಲ್ವಿನ್ ಪಾಯಸ್ ಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು

ಮಾಣಿ : ವಿವಾಹಿತ ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಯೊಬ್ಬನಿಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು ನೀಡಿದ ಘಟನೆ ಬಂಟ್ವಾಳದ ಮಾಣಿಯಲ್ಲಿ ನಡೆದಿದೆ. ಆರೋಪಿಯನ್ನು ಸೂರಿಕುಮೇರು- ಬೊರಿಮಾರು ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ, ಮಾಣಿ ಗ್ರಾಮದ ಲಕ್ಕಪ್ಪರ ಕೋಡಿ ನಿವಾಸಿ ಸ್ಟೀವನ್ ಆಲ್ವಿನ್ ಪಾಯಸ್ ಎಂದು ಗುರುತಿಸಲಾಗಿದ್ದು ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾರ್ಚ್ 4ರಂದು ಈ ಘಟನೆ ನಡೆದಿದ್ದು, ಮಹಿಳೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಸೂರಿಕುಮೇರು- ಬೊರಿಮಾರು ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಆಲ್ವಿನ್ ಸ್ಟೀವನ್ ಪಾಯಸ್ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವೇಳೆ ಕೋಪಗೊಂಡ ಮಹಿಳೆ ಆತನಿಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ್ದಾರೆ. ಸದ್ಯ ಮಹಿಳೆ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿ ಸ್ಟೀವನ್ ವಿರುದ್ಧ ಪ್ರಕರಣ ದಾಖಲಾಗಿದೆ. 

ಪ್ರಸ್ತುತ ಪ್ರಕರಣದಲ್ಲಿ ಆರೋಪಿಯಾಗಿರುವ ಆಲ್ವಿನ್ ಸ್ಟೀವನ್ ಪಾಯಸ್ ಇಂತಹ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಹೆಣ್ಮಕ್ಕಳ ಜೊತೆ ಅನುಚಿತವಾಗಿ ವರ್ತಿಸಿ, ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ಈತ ಹಿಂದೆ ಧರ್ಮಸ್ಥಳದ ಲಾಡ್ಜ್ ವೊಂದರಲ್ಲಿ ಅನ್ಯ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಲುಕಿ ಪೊಲೀಸರ ಅತಿಥಿಯಾಗಿದ್ದ. ಇನ್ನು ಚರ್ಚ್ ನಲ್ಲೂ- ಅನೇಕ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿರುವ ಆರೋಪವೂ ಕೇಳಿ ಬಂದಿದೆ. ಹಲವು ವರ್ಷಗಳ ಹಿಂದೆ ರಾತ್ರೋ ರಾತ್ರಿ ಏಕಾಂಗಿ ಮಹಿಳೆಯ ಮನೆಗೆ ನುಗ್ಗಿ ಸಿಕ್ಕಾಕಿಕೊಂಡು ಧರ್ಮದೇಟು ತಿಂದಿದ್ದ ಎನ್ನುವ ಆರೋಪವು ಕೇಳಿ ಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!