ಅಶ್ಲೀಲ, ಅಸಭ್ಯ ಕಂಟೆಂಟ್‌ ಪ್ರಸಾರ; 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ
ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಬಿತ್ತರಿಸುತ್ತಿದ್ದ ಓಟಿಟಿಗಳು
19 ವೆಬ್​ಸೈಟ್​ಗಳು, 10 ಆ್ಯಪ್​ಗಳನ್ನು ಸಹ ನಿಷ್ಟ್ರೀಯ
57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೂ ನಿಷೇಧ

ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್‌ ಪ್ರಸಾರಕ್ಕಾಗಿ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಭಾರತೀಯರು ಬಳಸುತ್ತಿದ್ದ 19 ವೆಬ್​ಸೈಟ್​ಗಳು, 10 ಆ್ಯಪ್​ಗಳು (ಗೂಲ್​ ಪ್ಲೇನಲ್ಲಿ 7, ಆ್ಯಪಲ್​ ಸ್ಟೋರ್​ನಲ್ಲಿ 3) ಮತ್ತು ಫ್ಲಾಟ್​ಫಾರ್ಮ್​ಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಷೇಧ ಹೂಡಿದೆ.

ನಿಷೇಧಿತ OTT ಪ್ಲಾಟ್‌ಫಾರ್ಮ್‌ಗಳ ಪಟ್ಟಿ

  • ಡ್ರೀಮ್ಸ್ ಫಿಲ್ಮ್​
  • ವೂವಿ
  • ಯೆಸ್ಮಾ
  • ಅನ್​ಕಟ್​ ಅಡ್ಡಾ
  • ಟ್ರೈ ಫ್ಲಿಕ್ಸ್
  • ಎಕ್ಸ್ ಪ್ರೈಮ್
  • ನಿಯಾನ್ ಎಕ್ಸ್ ವಿಐಪಿ
  • ಬೇಷರಮ್ಸ್
  • ಹಂಟರ್ಸ್​​
  • ರಾಬಿಟ್​
  • ಎಕ್ಸ್ಟ್ರಾಮೂಡ್
  • ನ್ಯೂಫ್ಲಿಕ್ಸ್
  • ಮೂಡ್​ಎಕ್ಸ್​
  • ಮೊಜ್​ಫ್ಲಿಕ್ಸ್​
  • ಹಾಟ್ ಶಾಟ್ಸ್ ವಿಐಪಿ
  • ಫ್ಯೂಗಿ
  • ಚಿಕೂಫ್ಲಿಕ್ಸ್
  • ಪ್ರೈಮ್ ಪ್ಲೇ

ಐಟಿ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್, ಸೃಜನಶೀಲ ಅಭಿವ್ಯಕ್ತಿಯ ಸೋಗಿನಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ನಿಂದನೆ ವಿಷಯಗಳನ್ನು ಪ್ರಚಾರ ಮಾಡಬಾರದು ಎಂದು ವೇದಿಕೆಗಳ ಜವಾಬ್ದಾರಿ ಕುರಿತು ಪದೇ ಪದೇ ಒತ್ತಿಹೇಳಿದ್ದಾರೆ.

ಸೃಜನಶೀಲ ಅಭಿವ್ಯಕ್ತಿ ಹೆಸರಿನಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅಶ್ಲೀಲತೆ, ಅಸಭ್ಯ ಕಂಟೆಂಟ್‌ಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳುವುದು ಆಯಾ ಪ್ಲಾಟ್‌ಫಾರ್ಮ್‌ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಠಾಕೂರ್‌ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ, ಯಾವುದೇ ಕಂಟೆಂಟ್‌ ಭಾರತದ ಸಂಸ್ಕೃತಿಯನ್ನು ಅವಮಾನಿಸದಂತೆ ಸಂವೇದನಾಶೀಲವಾಗಿರಬೇಕು ಎಂದು ಪ್ಲಾಟ್‌ಫಾರ್ಮ್‌ಗಳಿಗೆ ಸಚಿವರು ಮನವಿ ಮಾಡಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!